janadhvani

Kannada Online News Paper

ನಿಯಮ ಉಲ್ಲಂಘನೆಗೆ 2,527 ಮಂದಿಗೆ ದಂಡ ವಿಧಿಸಿದ ದುಬೈ ಪೊಲೀಸ್

ದುಬೈ: ರಾಷ್ಟ್ರೀಯ ಸೋಂಕುನಿವಾರಕ ಕಾರ್ಯಕ್ರಮದ ಅನುಸಾರ ವಿಧಿಸಿರುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದುಬೈ ಪೊಲೀಸರು 2,527 ಮಂದಿಗೆ ದಂಡ ವಿಧಿಸಿದ್ದಾರೆ. ಈ ಪೈಕಿ 2,076 ಎಚ್ಚರಿಕೆಗಳು ಮತ್ತು ಎಂಟು ದಂಡಗಳನ್ನು ಮನೆಬಿಟ್ಟು ಹೊರಗೆ ಬಂದವರಿಗೆ ನೀಡಲಾಗಿದೆ.

ಒಂದೇ ವಾಹನದಲ್ಲಿ ಅನುಮತಿಸಲಾದ ಗರಿಷ್ಠ (ಮೂರು) ಪ್ರಯಾಣಿಕರನ್ನು ಮೀರಿದ ಕಾರಣಕ್ಕಾಗಿ ಒಟ್ಟು 204 ಎಚ್ಚರಿಕೆಗಳು, ಒಂದು ದಂಡ, ಮಾಸ್ಕ್ ಧರಿಸದ ಕಾರಣ 233 ಎಚ್ಚರಿಕೆಗಳು ಮತ್ತು ಐದು ದಂಡಗಳನ್ನು ನೀಡಲಾಗಿದೆ.
ರಾಷ್ಟ್ರೀಯ ಸೋಂಕುನಿವಾರಕ ಕಾರ್ಯಕ್ರಮದಡಿ ಘೋಷಿಸಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದುಬೈ ಪೊಲೀಸರು ಸಾರ್ವಜನಿಕರನ್ನು ಕೋರಿದ್ದಾರೆ.

error: Content is protected !! Not allowed copy content from janadhvani.com