janadhvani

Kannada Online News Paper

ಆತಂಕ ಬೇಡ: ಯುಎಇಯ ವೀಸಾಗಳನ್ನು ವರ್ಷಾಂತ್ಯದ ವರೆಗೆ ವಿಸ್ತರಿಸಲಾಗಿದೆ

ದುಬೈ: ಕೋವಿಡ್-19ರ ಹಿನ್ನೆಲೆಯಲ್ಲಿ ಎಲ್ಲಾ ತರಹದ ವೀಸಾಗಳನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಯುಎಇ ಸಂದರ್ಶಕ ವೀಸಾ, ಎಂಟ್ರಿ ಪರ್ಮಿಟ್ ಮತ್ತು ಎಮಿರೇಟ್ಸ್ ಐಡಿಗಳಿಗೂ ಅದೇ ರಿಯಾಯಿತಿ ಲಭಿಸಲಿದೆ. ಮಾರ್ಚ್ 1 ರ ನಂತರ ಅವಧಿ ಮುಗಿದವರಿಗೆ ಈ ಕಾನೂನು ಅನ್ವಯಿಸುತ್ತದೆ.

ಯುಎಇ ಒಳಗೆ ಮತ್ತು ಹೊರಗಿರುವ ಎಲ್ಲಾ ರೆಸಿಡೆನ್ಸಿ ವಿಸಾ ಹೊಂದಿರುವವರು ವರ್ಷದ ಅಂತ್ಯದವರೆಗೆ ಈ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಆ್ಯಂಡ್ ಸಿಟಿಝನ್ಶಿಪ್ ವಕ್ತಾರರು ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

ಯುಎಇಯ ಈ ನಿರ್ಧಾರವು ದೇಶದ ಒಳಗೆ ಮತ್ತು ಹೊರಗೆ ಇರುವ ಅನೇಕ ಭಾರತೀಯರಿಗೆ ಸಮಾಧಾನಕರವಾಗಿದೆ. ಕೋವಿಡ್ 19 ರ ಹಿನ್ನೆಲೆಯಲ್ಲಿ ಪ್ರಯಾಣವು ಅನಿರ್ದಿಷ್ಟವಾಗಿ ವಿಳಂಬವಾಗುತ್ತಿದ್ದು, ವೀಸಾ ಕಾಲಾವಧಿ ಮುಗಿದವರು ಮತ್ತು ಕಾಲಾವಧಿ ಇರುವವರಲ್ಲೂ ಹೆಚ್ಚಿನ ಕಳವಳ ಉಂಟು ಮಾಡಿದೆ.

error: Content is protected !! Not allowed copy content from janadhvani.com