janadhvani

Kannada Online News Paper

ಕೋವಿಡ್-19: ಮರಣ ಸಂಖ್ಯೆ 21ಕ್ಕೆ ಏರಿಕೆ- ಮಕ್ಕಾ,ಮದೀನಾ ಸಂಪೂರ್ಣ ಲಾಕ್ ಡೌನ್

ಮಕ್ಕತುಲ್ ಮುಕರ್ರಮಃ, ಏ.2: ಕೋವಿಡ್-19 ಕಾಯಿಲೆಯಿಂದ ಇಂದು ಐದು ಮಂದಿ ಮೃತಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಕೊರೋನಾದಲ್ಲಿ ಮೃತಪಟ್ಟವರ ಸಂಖ್ಯೆ 21 ಕ್ಕೆ ಏರಿದೆ.

ಇಂದು ಹೊಸತಾಗಿ 165 ಮಂದಿಗೆ ಸೋಂಕು ದೃಢಪಟ್ಟಿದೆ.ದೇಶದಲ್ಲಿ ಕೋವಿಡ್ ಬಾಧಿತರ ಸಂಖ್ಯೆ 1885 ಕ್ಕೆ ಏರಿದೆ.64 ಮಂದಿ ಗುಣಮುಖರಾಗಿದ್ದು,ಒಟ್ಟು 328 ಮಂದಿ ರೋಗಮುಕ್ತರಾಗಿದ್ದಾರೆ.ಇಂದು ಮಕ್ಕಾ, ಮದೀನಾ ಮತ್ತು ಜಿದ್ದಾದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕೋವಿಡ್-19 ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಭಾಗವಾಗಿ ಮಕ್ಕಾ ಮತ್ತು ಮದೀನಾದಲ್ಲಿ 24 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ. ಇಂದಿನಿಂದ, ಮುಂದಿನ ಆದೇಶದವರೆಗೆ ಯಾರಿಗೂ ಮದೀನಾ ಅಥವಾ ಮಕ್ಕಾಗೆ ಪ್ರವೇಶ ಹಾಗೂ ನಿರ್ಗಮನ ಸಾಧ್ಯವಿಲ್ಲ.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಆಹಾರ ಖರೀದಿಸಲು ಮತ್ತು ಆಸ್ಪತ್ರೆಗಳಿಗೆ ಹೋಗಲು ಅವಕಾಶವಿದೆ.

ಆಹಾರ ಪೂರೈಕೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಔಷಧಾಲಯ,ಆಹಾರ ಸಾಮಗ್ರಿಗಳ ಮಳಿಗೆ , ಪೆಟ್ರೋಲ್ ಪಂಪ್‌ಗಳು ಮತ್ತು ಬ್ಯಾಂಕ್ ಸೇವೆಗಳನ್ನು ಹೊರತುಪಡಿಸಿ ಯಾವುದನ್ನೂ ತೆರೆಯುವಂತಿಲ್ಲ.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಆಸ್ಪತ್ರೆಗಳಿಗೆ ಅಥವಾ ಆಹಾರ ಖರೀದಿಗೆ ತೆರಳುವ ವಾಹನದಲ್ಲಿ ಡ್ರೈವರ್ ಮತ್ತು ಒಬ್ಬ ವ್ಯಕ್ತಿಯನ್ನು ಮಾತ್ರ ಅನುಮತಿಸಲಾಗಿದೆ.

error: Content is protected !! Not allowed copy content from janadhvani.com