janadhvani

Kannada Online News Paper

ಕೊರೋನಾ ಮರೆಯಲ್ಲಿ ಹರುಡುತ್ತಿದೆಯೇ ಮಹಾಮಾರಿ ‘ಕೋಮು ವೈರಸ್’..?

ಮಾರ್ಚ್ ಇಪ್ಪತ್ತಕ್ಕೆ ಸಂಸತ್ ಕಾರ್ಯಕ್ರಮದಲ್ಲಿ ಮೋದಿ ಜೊತೆ ಸೆಲ್ಫಿ ತೆಗೆದುಕೊಳ್ಳುವಷ್ಟು ಸಲುಗೆ ಇರುವ ಕಣ್ಣಿಕಾ ಕಪೂರ್ ಎಂಬ ನಟಿಯೊಬ್ಬಳು ನೂರಕ್ಕೂ ಸಂಸತ್ ಸದಸ್ಯರೊಡನೆ ರಾಷ್ಟ್ರಪತಿಗಳ ಔತಣಕೂಟದಲ್ಲಿ ಪಾಲ್ಗೊಂಡಿದ್ದಳು ಅದಾದ ಎರಡ್ಮೂರು ದಿನಗಳಲ್ಲಿ ಆಕೆಗೆ ಕೊರೊನ ಇದೆ ಎಂಬುದು ದೃಢಪಟ್ಟಿತು. ಹಾಗಾದರೆ ಮಾಧ್ಯಮಗಳು ಇದನ್ನ ಕೂಡ ಇಸ್ಲಾಮ್ ವೈರಸ್ಸಿನಂತೆ ಹಿಂದೂ ವೈರಸ್ ಎನ್ನುತ್ತದೆಯೇ??, ಆಕೆಗೂ ಉಗ್ರ ಸಂಘಟನೆಗಳೊಂದಿಗೆ ಸಂಭಂದವಿದೆ ಅಂತ ಬಿತ್ತರಿಸುತ್ತದೆಯೇ?


#ನಿಝಾಮುದ್ದೀನ್_ಹಿಂದಿನ_ಅಸಲಿಯತ್ತು!!

ನಾವು ಯಾವ ವಿಷಯ ಚರ್ಚಿಸಬೇಕು, ಯಾವ ವಿಷಯ ಚರ್ಚಿಸಬಾರದು. ಇದ್ದ ವಿಷಯ ಬಿಟ್ಟು ಬೇರೆ ವಿಷಯದ ಕಡೆ ಯಾವ ರೀತಿ ವಾಲಬೇಕು ಅಂತ ಮಾಧ್ಯಮಗಳು ನಮಗೆ ಗೊತ್ತಿಲ್ಲದಂತೆ ನಮ್ಮನ್ನ ನಿಯಂತ್ರಣ ಮಾಡ್ತಿವೆ ಅನ್ನೋದು ಇಲ್ಲಿಯವರೆಗೆ ಎಷ್ಟೋ ಜನರಿಗೆ ಅರಿವಿಗೆ ಬಂದಿಲ್ಲ. ಇಷ್ಟು ದಿನ ಚೀನಾ ಚೀನಾ ಅಂದ ನಾವೇ ಈಗ ನಿಜಾಮುದ್ದೀನ್ ಕಡೆಗೆ ಮುಖ ಮಾಡಿ ನಿಂತಿದ್ದೀವಿ ಅಂದ್ರೆ ಮಾಧ್ಯಮಗಳ ಕರಾಳಮುಖ ಮೊದಲು ಅರ್ಥ ಮಾಡಿಕೊಳ್ಳಬೇಕು..

ಮಾರ್ಚ್ ಹನ್ನೆರಡನೇ ತಾರೀಖಿನಂದು ಸ್ವತಃ ಭಾರತದ ಆರೋಗ್ಯ ಸಚಿವಾಲಯವೇ ಕೊರೊನದಿಂದ ಯಾವುದೇ ಸಾವು ಸಂಭವಿಸುವುದಿಲ್ಲ ಅಂತ ಉಸುರಿ ಬಿಟ್ಟಿತ್ತು, ಅದಾದ ನಂತರ 13ನೆ ತಾರೀಖಿನಿಂದ 15ನೇ ತಾರೀಖಿನವರೆಗೆ ನಿಜಾಮುದ್ದೀನ್ ನಲ್ಲಿ ಸಭೆ ನಡೆದಿತ್ತು ನಿಜಾಮುದ್ದೀನ್ ಮಸೀದಿಯಲ್ಲಿ ಸಭೆ ಸೇರಿದನ್ನೇ ನಾವು ದೊಡ್ಡ ಟಾರ್ಗೆಟ್ ಎನ್ನುವಂತೆ ಮಾತನಾಡ್ತಿದೀವಿ ಆದರೆ ಅದರ ನಂತರ ನಮ್ಮ ದೇಶದಲ್ಲಿ ಸಾಕಷ್ಟು ಸಭೆ ಸಮಾರಂಭಗಳಾಗಿವೆ ಅಸ್ಟೇ ಯಾಕೆ ಶಿರಡಿ, ವೈಷ್ನೋದೇವಿ, ಶನಿ ಶಿಂಗನಾಪುರ, ತಿರುಪತಿ ತಿಮ್ಮಪ್ಪ, ಸಿದ್ಧಿ ವಿನಾಯಕ, ಮಹಾಕಾಳೇಶ್ವರ, ಕಾಶಿ ವಿಶ್ವನಾಥ ಮಂದಿರಗಳು ಮಾರ್ಚ್ 18ರ ವರೆಗೆ ತೆರೆದಿತ್ತು. ಮಾರ್ಚ್ 23ರ ತನಕ ಸಂಸತ್ ಬಾಗಿಲೇ ತೆರೆದಿತ್ತು ಆದರು ಮಾಧ್ಯಮಗಳು 13ನೇ ತಾರೀಖಿಗೆ ತೆರೆದ ನಿಜಾಮುದ್ದೀನ್ ಒಂದನ್ನೇ ಟಾರ್ಗೆಟ್ ಮಾಡಿದ್ದು ಯಾಕೆ??

ಕೊರೋನದಿಂದ ಭಾರತದ ಜನತೆಗೆ ಮತ್ತು ಆರ್ಥಿಕತೆಗೆ ಸುನಾಮಿಯಂತೆ ಹೊಡೆತ ಬೀಳಲಿದೆ ಅಂತ ಫೆಬ್ರವರಿ 12ನೇ ತಾರೀಖಿಗೆ ರಾಹುಲ್ ಗಾಂಧಿ ಎಚ್ಚರಿಕೆ ಕೊಟ್ಟರು ಸಹ ನಮ್ಮ ಪ್ರಧಾನಿ ಫೆಬ್ರುವರಿ 19ಕ್ಕೆ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ ವ್ಹಾ Had tasty Litti Choka ‘ ಅಂತ ಲಿಟ್ಟಿ-ಛೋಕಾ ಮೆಲ್ಲುತ್ತಾ ಟ್ವೀಟ್ ಮಾಡ್ತಾರೆ ಹಾಗಾದ್ರೆ ಮಾಧ್ಯಮಗಳನ್ನೇ ಕೇಳಿ. ಇದು ಪ್ರಧಾನಿಯ ಬೇಜವಾಬ್ದಾರಿತನ ಅಲ್ಲವೇ??

ಅದು ಹೋಗಲಿ. ಫೆಬ್ರುವರಿ ತಿಂಗಳ 23ನೇ ತಾರೀಖಿನಂದು ನಮ್ಮ ಪ್ರಧಾನಿ ಅಮೆರಿಕಾದ ದೊಡ್ಡಣ್ಣನನ್ನ ಕರೆದು ಇಲ್ಲಿಯ ಲಕ್ಷಾಂತರ ಜನರನ್ನ ಸೇರಿಸಿ ‘ನಮಸ್ತೆ ಟ್ರoಪ್’ ಎನ್ನುವ ದೊಡ್ಡ ಕಾರ್ಯಕ್ರಮ ಮಾಡಿದರು.. ಆದರೂ ಯಾಕೆ ಈ ಮಾಧ್ಯಮಗಳು ನಮ್ಮ ಮೋದಿಯ ದಡ್ಡತನದ ಬಗ್ಗೆ ಚಕಾರವೆತ್ತುತ್ತಿಲ್ಲ.

ಇದು ಬಿಡಿ. ಮಾರ್ಚ್ ಇಪ್ಪತ್ತಕ್ಕೆ ಸಂಸತ್ ಕಾರ್ಯಕ್ರಮದಲ್ಲಿ ಮೋದಿ ಜೊತೆ ಸೆಲ್ಫಿ ತೆಗೆದುಕೊಳ್ಳುವಷ್ಟು ಸಲುಗೆ ಇರುವ ಕಣ್ಣಿಕಾ ಕಪೂರ್ ಎಂಬ ನಟಿಯೊಬ್ಬಳು ನೂರಕ್ಕೂ ಸಂಸತ್ ಸದಸ್ಯರೊಡನೆ ರಾಷ್ಟ್ರಪತಿಗಳ ಔತಣಕೂಟದಲ್ಲಿ ಪಾಲ್ಗೊಂಡಿದ್ದಳು ಅದಾದ ಎರಡ್ಮೂರು ದಿನಗಳಲ್ಲಿ ಆಕೆಗೆ ಕೊರೊನ ಇದೆ ಎಂಬುದು ದೃಢಪಟ್ಟಿತು. ಹಾಗಾದರೆ ಮಾಧ್ಯಮಗಳು ಇದನ್ನ ಕೂಡ ಇಸ್ಲಾಮ್ ವೈರಸ್ಸಿನಂತೆ ಹಿಂದೂ ವೈರಸ್ ಎನ್ನುತ್ತದೆಯೇ??, ಆಕೆಗೂ ಉಗ್ರ ಸಂಘಟನೆಗಳೊಂದಿಗೆ ಸಂಭಂದವಿದೆ ಅಂತ ಬಿತ್ತರಿಸುತ್ತದೆಯೇ?? ಆಕೆ ನೂರಾರು ಜನ ಗಣ್ಯರಿಗೆ ಕೈ ಕುಲುಕಿದ್ದಳು, ಅವಳಿಂದ ಎಷ್ಟು ಜನರಿಗೆ ಕೊರೊನ ಬಂದಿರಬಹುದು, ಅವರಿಂದ ಇನ್ನೆಷ್ಟು ಜನರಿಗೆ ಬಂದಿರಬಹುದು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಷ್ಟು ಜನರ ವೈದ್ಯಕೀಯ ಪರೀಕ್ಷೆಯನ್ನ ರಾಷ್ಟ್ರಪತಿಗಳ ಕಾರ್ಯಾಲಯ ಬಹಿರಂಗಪಡಿಸಲಿ ನೋಡೋಣ. ಆಗ ಕರ್ಪೂರದ ಕನ್ನಿಕೆಯಿಂದ ಕೊರೊನ ಕಾಯಿಲೆ ಎಷ್ಟು ಜನ ಹಿಂದುಗಳಿಗೆ ಬಂದಿರಬಹುದು ಎನ್ನುವ ಬಣ್ಣ ಬಯಲಿಗೆ ಬರುತ್ತೆ (ಕೊರೊನದ ಬಗ್ಗೆ ನಾವು ನೀವು ನೋಡುತ್ತಿರುವ ಅಂಕಿ-ಅಂಶಗಳೇ ಬೇರೆ, ಸರ್ಕಾರ ಮುಚ್ಚಿಡುತ್ತಿರುವ ಅಂಕಿ-ಅಂಶಗಳೇ ಬೇರೆ. ಕೆಲವೇ ದಿನಗಳಲ್ಲಿ ಇದು ಬೆಳಕಿಗೆ ಬರಲಿದೆ)

ಇದೆಲ್ಲ ಹೋಗಲಿ ಕೊನೆಯದಾಗಿ ಹೇಳಿ ಬಿಡ್ತೀನಿ ಕೇಳಿ. ಮಾರ್ಚ್ 22ಕ್ಕೆ ಜನತಾ ಕರ್ಫ್ಯುಗೆ ಕರೆ ಕೊಟ್ಟಿದ್ದ ಮೋದಿ ಸಾಹೇಬರು ಅದೇ ದಿನ ಮಧ್ಯಪ್ರದೇಶದ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರನ್ನ ವಿಮಾನದ ಮೂಲಕ ಬೆಂಗಳೂರಿನಿಂದ ದೆಹಲಿಗೆ ಅಪಹರಿಸಿಕೊಂಡು ಹೋಗಿದ್ದರು. ಹಾಗಾದ್ರೆ ಜನತಾ ಕರ್ಫ್ಯು ಕರೆ ಕೊಟ್ಟಿದ್ದು ಜನರ ಗಮನ ಬೇರೆಡೆ ಸೆಳೆಯುವುದಕ್ಕಾ?? ಯಾಕೆ ಮಾಧ್ಯಮಗಳು ಬಿಜೆಪಿ ನಾಯಕರನ್ನ ಪ್ರಶ್ನೆ ಮಾಡಲಿಲ್ಲ.. ಮಾರನೇ ದಿನ ಅಂದರೆ 23ನೇ ತಾರೀಖಿಗೆ ಮಧ್ಯಪ್ರದೇಶದ ಆ ಎಲ್ಲ ಶಾಸಕರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡ ಮೋದಿ ಮತ್ತು ತಂಡ ಮಾರನೇ ದಿನ 24ನೆ ತಾರೀಖಿಗೆ ದೇಶಾದ್ಯಂತ Lockdownಗೆ ಕರೆ ಕೊಟ್ಟಿದ್ದು ಯಾಕೆ. ಅಂದರೆ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವ ಕಸರತ್ತಿಗಾಗಿ ಬೇಕಂತಲೇ ಕೊರೊನ ಬಗ್ಗೆ ಅಸಡ್ಡೆ ತಾಳಲಾಯಿತೆ??.. ಹಾಗಾದ್ರೆ ಮಾಧ್ಯಮಗಳು ಪ್ರಶ್ನಿಸಬೇಕಾಗಿದ್ದು ಯಾರನ್ನ??.. ಮೋದಿ ಮಾರ್ಚ್ 23ನೇ ತಾರೀಖಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶಿವರಾಜಸಿಂಗ್ ಚೌಹಾಣ್ ಗೆ ಶುಭಾಶಯ ತಿಳಿಸುತ್ತಾರೆ. ಯಾಕೆ ಮೋದಿಯ ಕುಟಿಲ ನೀತಿಯನ್ನ ಮಾಧ್ಯಮಗಳು ಎಳೆಎಳೆಯಾಗಿ ಬಿಡಿಸಿ ಹೇಳಲಿಲ್ಲ??

ಭಾರತಕ್ಕೆ ಕೊರೊನ ಬಂದು ವಕ್ಕರಿಸಿದ್ದು ಮೋದಿ ಸರ್ಕಾರದ ಇಷ್ಟೆಲ್ಲ ವೈಫಲ್ಯದಿಂದ. ಆಗಲೇ ವಿದೇಶದಿಂದ ಬಂದವರನ್ನ ಒಂದೆಡೆ ಕೂಡಿಟ್ಟಿದ್ದರೆ ಇಷ್ಟೆಲ್ಲ ಅನಾಹುತಗಳೇ ಆಗುತ್ತಿರಲಿಲ್ಲ ಆದರೂ ಗೋದಿ ಮೀಡಿಯಾ ಮಾತ್ರ ನಿಜಾಮುದ್ದೀನ್ ಪ್ರಕರಣ ಒಂದನ್ನೇ ದೊಡ್ಡದು ಮಾಡಿ ಮುಸ್ಲಿಮರನ್ನ ಮಾತ್ರ ಎಳೆದುಕೊಂಡು ಬರುತ್ತಿರೋದು ಯಾಕೆ ಅನ್ನೋದನ್ನೇ ಸಾಮಾನ್ಯ ಜನ ಅರ್ಥ ಮಾಡಿಕೊಂಡರೆ ಸಾಕು..

ಒಂದು ತಂಡ ಮಾಧ್ಯಮಗಳು ಏನು ಮಾತನಾಡಬೇಕು ಅಂತ ಹೇಳಿ ಕೊಡ್ತಿದೆ, ಮಾಧ್ಯಮಗಳು ಜನ ಏನು ಮಾತನಾಡಬೇಕು ಅಂತ ನಿರ್ಧರಿಸುತ್ತಿವೆ. ನಾವೆಲ್ಲ ಮಾಧ್ಯಮಗಳು ಕುಣಿಸಿದಂತೆ ತಕಥೈ ತಕಥೈ ಅಂತ ಕುಣಿಯುತ್ತಿದ್ದೆವೇ!!  ದಯವಿಟ್ಟು ಇವರೆಲ್ಲರ ಕ್ರೋನಾಲಾಜಿ ಅರ್ಥ ಮಾಡಿಕೊಳ್ಳಿ!!

 

– Jagadish Soorya fb 

error: Content is protected !! Not allowed copy content from janadhvani.com