janadhvani

Kannada Online News Paper

ಕೊರೋನಾ: ಎಲ್ಲರೂ ಮಾಸ್ಕ್ ಧರಿಸುವಂತೆ ಒತ್ತಾಯಿಸಬೇಕಿಲ್ಲ -ಸರ್ಕಾರ ಸ್ಪಷ್ಟನೆ

ಬೆಂಗಳುರು,ಮಾ.31: ಅನೇಕ ಮಳಿಗೆಗಳು , ಅಂಗಡಿಗಳು ಮತ್ತು ಸಂಸ್ಥೆಗಳು ಮಾಸ್ಕ್ ಧರಿಸುವಂತೆ ಜನರಿಗೆ ಒತ್ತಾಯಿಸುತ್ತಿದೆ ಎನ್ನುವುದು ಗಮನಿಸಿದ ರಾಜ್ಯ ಸರ್ಕಾರ ಮಂಗಳವಾರ ಈ ಸಂಬಂಧ ಸ್ಪಷ್ಟನೆ ನೀಡಿದೆ. ಅದರಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕಾಗಿಲ್ಲ.

ಯಾರ್ಯಾರು,ಯಾವ ರೀತಿಯ ಮಾಸ್ಕ್ ಧರಿಸಬೇಕು ?

  • ಒಬ್ಬ ವ್ಯಕ್ತಿಯು ಶೀತ ಅಥವಾ ಕೆಮ್ಮು ಅಥವಾ ಜ್ವರ ಅಥವಾ ಇನ್ನಾವುದೇ ಉಸಿರಾಟದ ತೊಂದರೆಯ ಲಕ್ಷಣದಿಂದ ಕೂಡಿದ್ದಲ್ಲಿ ಮಾತ್ರವೇ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹೇಳೀದ್ದಾರೆ.
  • ಕೋವಿಡ್-19 ಶಂಕಿತ ಅಥವಾ ದೃಢವಾಗಿರುವ ರೋಗಿಯನ್ನು ನೋಡಿಕೊಳ್ಳುವ ವ್ಯಕ್ತಿಯು ಮಾಸ್ಕ್ ಧರಿಸಬೇಕು
  • ಉಸಿರಾಟದ ತೊಂದರೆಯ ಲಕ್ಷಣಗಳಿರುವ ರೋಗಿಯ ಪರೀಕ್ಷಿಸಲು ಹಾಜರಾಗುವ ಆರೋಗ್ಯ ಕಾರ್ಯಕರ್ತ ಮಾಸ್ಕ್ ಧರಿಸಬೇಕಿದೆ.
  • ಕೊರೋನಾ ಶಂಕಿತರು ಅಥವಾ ರೋಗಿಗಳಿಗೆ ಚಿಕಿತ್ಸೆ ನೀಡುವ ಅಥವಾ ಅವರ ಮೇಲ್ವಿಚಾರಣೆ ನಡೆಸುವ ವ್ಯಕ್ತಿಗಳು ಎನ್95 ಮಾಸ್ಕ್ ಧರಿಸಬೇಕಾಗುತ್ತದೆ.
  • ಉಳಿದವರು ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಬಹುದು ಎಂದು ಸರ್ಕಾರ ಹೇಳಿದೆ.

error: Content is protected !! Not allowed copy content from janadhvani.com