ರಿಯಾದ್: ಕೊರೋನ ವೈರಸ್ ವಿರುದ್ಧ ಹೋರಾಡುವ ಕಾರ್ಯವಿಧಾನಗಳ ಭಾಗವಾಗಿ ವಲಸೆ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿತರಾಗಿರುವ 250 ಕ್ಕೂ ಹೆಚ್ಚು ವಿದೇಶಿ ಬಂಧಿತರನ್ನು ಸೌದಿ ಅರೇಬಿಯಾ ಬಿಡುಗಡೆ ಮಾಡಿದೆ ಎಂದು ಮಾನವ ಹಕ್ಕುಗಳ ಆಯೋಗದ (ಎಚ್ಆರ್ಸಿ) ಅಧ್ಯಕ್ಷ ಅವಾದ್ ಅಲ್ ಅವಾದ್ ಸೋಮವಾರ ತಿಳಿಸಿದ್ದಾರೆ.
250 ಕ್ಕೂ ಹೆಚ್ಚು ಬಂಧಿತರನ್ನು ಬಿಡುಗಡೆ ಮಾಡುವ ಸೌದಿ ಅಧಿಕಾರಿಗಳ ನಿರ್ಧಾರವನ್ನು ನಾವು ಶ್ಲಾಘಿಸುತ್ತೇವೆ ಎಂದು ಅಲ್ ಆವಾದ್ ಟ್ವೀಟ್ ಮಾಡಿದ್ದಾರೆ.
ಬಂಧಿತರನ್ನು ತಮ್ಮ ಊರಿಗೆ ಕಳಿಸುವ ನಿಟ್ಟಿನಲ್ಲಿ ಬಿಡುಗಡೆ ಮಾಡುವುದು, ಸಾರ್ವಜನಿಕ ಸುರಕ್ಷತೆಗೆ ಯಾವುದೇ ರಾಜಿಯಾಗದಂತೆ ಜೈಲಿನಲ್ಲಿರುವ ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಯಿಟರ್ಸ್ಗೆ ನೀಡಿದ ಹೇಳಿಕೆಯಲ್ಲಿ ಹೇಳಿದರು.
ಕೊರೋನ ಎಂಬ ಪಿಡುಗಿನಿಂದ ಸೌದಿ ಮಣ್ಣಿನಲ್ಲಿರುವ ಪ್ರತಿಯೊಬ್ಬರನ್ನು ರಕ್ಷಿಸುವ ಸೌದಿ ಅರೇಬಿಯಾದ ಪ್ರತಿಜ್ಞೆಯನ್ನು ಈ ನಿರ್ಧಾರವು ದೃಢಪಡಿಸುತ್ತದೆ ಎಂದು ಅಲ್-ಅವಾದ್ ಹೇಳಿದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು