ಕುವೈತ್‌ನಲ್ಲಿ ಸಾರ್ವಜನಿಕ ಕ್ಷಮಾಪಣೆ- ದಂಡವಿಲ್ಲದೆ ದೇಶ ತೊರೆಯಲು ಅವಕಾಶ

ಕುವೈತ್ ಸಿಟಿ: ಕುವೈತ್‌ನಲ್ಲಿ ಸಾರ್ವಜನಿಕ ಕ್ಷಮಾಪಣೆ ಘೋಷಿಸಲಾಗಿದೆ. ಇಖಾಮಾ ಕಾಲಾವಧಿ ಮುಗಿದವರಿಗೂ ದಂಡವಿಲ್ಲದೆ ದೇಶವನ್ನು ತೊರೆಯುವ ಅವಕಾಶ ಲಭಿಸಲಿದ್ದು, ಈ ಕುರಿತು ಗೃಹ ಸಚಿವ ಅನಸ್ ಅಲ್‌ಸಾಲಿಹ್ ಆದೇಶ ಹೊರಡಿಸಿದ್ದಾರೆ. ಈ ವಿನಾಯ್ತಿಯು ಏಪ್ರಿಲ್ 1 ರಿಂದ 30 ರವರೆಗೆ ಲಭ್ಯವಿದೆ.

ಈ ಅವಧಿಯಲ್ಲಿ, ಈ ಹಿಂದೆ ಕಾನೂನು ಉಲ್ಲಂಘಿಸಿದವರು ಬೇರೆ ಯಾವುದೇ ಕ್ರಮಗಳನ್ನು ಎದುರಿಸದೆ ಊರಿಗೆ ಮರಳಲು ಸಾಧ್ಯವಾಗಲಿದೆ. ಕಾನೂನಿನ ವಿಧಾನಗಳ ಮೂಲಕ ಕುವೈತ್‌ಗೆ ಮರಳುವುದು ಕೂಡ ಸಾಧ್ಯವಾಗಲಿದೆ.

ವಾಪಸಾತಿಗೆ ಆಡಳಿತಾತ್ಮಕ ಅಥವಾ ಕಾನೂನು ಅಡೆತಡೆಗಳನ್ನು ಹೊಂದಿರುವ ವಿದೇಶಿ ಪ್ರಜೆಗಳು, ವಸತಿ ಇಲಾಖೆಯನ್ನು ಸಂಪರ್ಕಿಸಲು ಮತ್ತು ಅವರ ಪ್ರಕರಣಗಳನ್ನು ಪರಿಶೀಲಿಸುವಂತೆ ಕೋರಲು ಅವಕಾಶವಿದೆ.

ನಿಗದಿತ ಸಮಯದೊಳಗೆ ಕ್ಷಮಾಪಣೆ ಸೌಕರ್ಯವನ್ನು ಬಳಸದ ಕಾನೂನು ಉಲ್ಲಂಘಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಕೆಳಗೆ ತಿಳಿಸಲಾದ ಆರು ವರ್ಗದ ವ್ಯಕ್ತಿಗಳಿಗೆ ದಂಡ ಪಾವತಿಸಿ, ವಸತಿ ಪರವಾನಗಿ ತಿದ್ದುಪಡಿಸಲು ಅನುಮತಿ ನೀಡಲಾಗಿದೆ.

ಕುವೈತ್ ನಾಗರಿಕರ ವಿದೇಶಿ ಪತ್ನಿಯರು.
ಕುವೈತ್ ನಾಗರಿಕರ ವಿದೇಶಿ ಹೆತ್ತವರು.
ಕುವೈತೀ ಮಹಿಳೆಯ ವಿದೇಶಿ ಗಂಡ ಮತ್ತು ಅವರ ಮಕ್ಕಳು
ಕುವೈತೀ ಗಂಡನಿಂದ ವಿಚ್ಛೇದನ ಪಡೆದ ಅಥವಾ ವಿಧವೆಯಾದ ಆದರೆ ತನ್ನ ಆರೈಕೆಯಲ್ಲಿ ಮಕ್ಕಳನ್ನು ಹೊಂದಿರುವ ವಿದೇಶಿ ಮಹಿಳೆಯರು,
ಗೃಹ ಕಾರ್ಮಿಕರು.
ಮಾರ್ಚ್ 1ರ ನಂತರ ಕಾನೂನು ಉಲ್ಲಂಘಕರಾದವರು.

ಕುವೈತ್ ಈ ಹಿಂದೆ ಕೊನೆಯದಾಗಿ 2018ರ ಜನವರಿಯಲ್ಲಿ ಕ್ಷಮಾದಾನವನ್ನು ನೀಡಿದ್ದವು. ಏತನ್ಮಧ್ಯೆ, ಕೋವಿಡ್ ಸನ್ನಿವೇಶದಲ್ಲಿ ಯಾವುದೇ ವಿಮಾನಗಳಿಲ್ಲದ ಕಾರಣ ಭಾರತೀಯರು ಸೇರಿದಂತೆ ವಲಸಿಗರು ಬಿಡುವಿನ ವೇಳೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಆತಂಕದಲ್ಲಿದ್ದಾರೆ.

ತಮ್ಮ ನಾಗರಿಕರನ್ನು ಮರಳಿ ಕರೆಸಲು ಮುಂದಾಗಿರುವ ಕೆಲವು ದೇಶಗಳಿಗೆ ವಿಶೇಷ ವಿಮಾನಯಾನವನ್ನು ಕುವೈತ್ ವಿಮಾನಯಾನ ಸಚಿವಾಲಯ ಈಗಾಗಲೇ ಅನುಮೋದಿಸಿದೆ. ರಾಜತಾಂತ್ರಿಕ ಕ್ರಮಗಳ ಮೂಲಕ ಕೇಂದ್ರ ಸರಕಾರವು ನಾಗರಿಕರನ್ನು ಹಿಂದಕ್ಕೆ ಕರೆಸಲು ಮುಂದಾಗುವುದೇ ಎಂದು ಕುವೈಟ್‌ನ ಭಾರತೀಯ ಸಮೂಹವು ಎದುರು ನೋಡುತ್ತಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!