janadhvani

Kannada Online News Paper

ಅಧಿಕಾರಿಗಳ ಅನಾಸ್ಥೆ: ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನಾ ಭೀತಿ- ಆತಂಕಕಾರಿ ಆಡಿಯೋ ವೈರಲ್

ಮಂಗಳೂರು, ಮಾ.23: ಕೊರೋನಾ ವೈರಸ್ ಸೋಂಕು ಅಪಾಯದ ಮಟ್ಟಕ್ಕೆ ಹರಡುವ ಪರಿಸ್ಥಿತಿ ಬಂದಿದೆ. ದೇಶದ 14-15 ರಾಜ್ಯಗಳು ಲಾಕ್ ಡೌನ್ ಮಾಡಿವೆ. ಕರ್ನಾಟಕದಲ್ಲಿ ಈಗಾಗಲೇ ದ.ಕ.ಜಿಲ್ಲೆ ಸೇರಿದಂತೆ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದ್ದು, ರಾಜ್ಯಾದ್ಯಂತ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ.

ಕೋವಿಡ್-19 ಭಯಾನಕತೆಗೆ ಇಡೀ ವಿಶ್ವವೇ ತಲ್ಲಣಗೊಂಡಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಆದರೆ ಕರ್ನಾಟಕ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದಾಗಿ ದಿನೇನೆ ಹೇಳುತ್ತಿದ್ದರೂ ದ.ಕ.ಜಿಲ್ಲೆಯ ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಗಾಗಿ ಯಾವುದೇ ಬಂದೋಬಸ್ತಿನ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂಬ ಆತಂಕಕಾರಿ ಸುದ್ದಿಯೊಂದು ಅಲ್ಲಿನ ಸಿಬ್ಬಂದಿಯ ಆಡಿಯೋ ಧ್ವನಿಯಿಂದ ತಿಳಿದು ಬಂದಿದೆ.ಈ ಆಡಿಯೋ ಸಾಮಾಜಿಕ ತಾಣದಲ್ಲಿ ವೈರಲಾಗುತ್ತಿದೆ.

ಕೊರೋನಾ ಶಂಕಿತರನ್ನೂ ಇತರ ರೋಗಿಗಳನ್ನೂ ಒಂದೇ ಕಡೆ ಕುಳ್ಳಿರಿಸಲಾಗುತ್ತಿದೆ,ಇದು ಆಸ್ಪತ್ರೆಯ ಸಿಬ್ಬಂದಿ ವರ್ಗದಿಂದಲೂ, ಇತರ ರೋಗಿಗಳಿಂದಲೂ ಕೊರೋನಾ ಹರಡಲು ಕಾರಣವಾಗಲಿದೆ ಎಂದು ಆಡಿಯೊ ಧ್ವನಿಯಿಂದ ಮನವರಿಕೆಯಾಗ್ತಿದೆ.ಜಿಲ್ಲಾಧಿಕಾರಿಯವರು ಸೂಕ್ಷ್ಮ ಪರಿಶೀಲನೆಗೆ ಮುಂದಾಗಿಲ್ಲವೆಂದೂ ಧ್ವನಿಯಲ್ಲಿ ಕೇಳಿ ಬಂದಿದ್ದು, ಆಸ್ಪತ್ರೆ ಸಿಬ್ಬಂದಿಗಳು ಸಮೇತ ನಗರ ನಿವಾಸಿಗಳು ಆತಂಕಗೊಂಡಿದ್ದಾರೆ.

ಕೂಡಲೇ ರಾಜ್ಯ ಆರೋಗ್ಯ ಸಚಿವರು ಇತ್ತ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.ಜಿಲ್ಲಾಧಿಕಾರಿಯವರು ಈಗಾಗಲೇ ದ.ಕ.ಜಿಲ್ಲೆಯನ್ನು ಹತೋಟಿಗೆ ತರಲು ಕಠಿಣ ಶ್ರಮ ನಡೆಸುತ್ತಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿದಲ್ಲಿ ತಮ್ಮ ಎಲ್ಲಾ ಶ್ರಮವು ವ್ಯರ್ಥವಾಗುವುದರಲ್ಲಿ ಸಂದೇಹವಿಲ್ಲ, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡು ನಗರ ನಿವಾಸಿಗಳ ಆತಂಕವನ್ನು ದೂರೀಕರಿಸ ಬೇಕಿದೆ.

ಮಂಗಳೂರು: ಕೊರೋನಾ ಎದುರಿಸಲು ವೆನ್ಲಾಕ್ ಆಸ್ಪತ್ರೆ ಸರ್ವ ಸನ್ನದ್ಧ- ಜಿಲ್ಲಾಧಿಕಾರಿ

ವೆನ್ಲಾಕ್ ಆಸ್ಪತ್ರೆ: ಗೊಂದಲಕ್ಕೆ ತೆರೆ- ಸಂಸದ ನಳಿನ್ ಕುಮಾರ್ ರಿಂದ ಕ್ಷಿಪ್ರ ಸಂದರ್ಶನ

error: Content is protected !! Not allowed copy content from janadhvani.com