janadhvani

Kannada Online News Paper

ಲಾಕ್ ಡೌನ್​: ಬಡವರಿಗೆ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಊಟ

ಬೆಂಗಳೂರು,ಮಾ. 23: ಕೊರೋನಾ ವೈರಸ್ ಸೋಂಕು ಅಪಾಯದ ಮಟ್ಟಕ್ಕೆ ಹರಡುವ ಪರಿಸ್ಥಿತಿ ಬಂದಿದೆ. ದೇಶದ 14-15 ರಾಜ್ಯಗಳು ಲಾಕ್ ಡೌನ್ ಮಾಡಿವೆ. ಕರ್ನಾಟಕದಲ್ಲೂ ರಾಜ್ಯಾದ್ಯಂತ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ. ಈ ವೇಳೆ, ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟು, ಶಾಲೆ ಕಾಲೇಜು, ಕಚೇರಿ ಇತ್ಯಾದಿಗಳನ್ನು ಬಂದ್ ಮಾಡಿ ಎಲ್ಲಾ ನಾಗರಿಕರು ಮನೆಯಲ್ಲೇ ಕೂರಬೇಕಾಗಬಹುದು.

ಲಾಕ್ ಡೌನ್​ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಗುತ್ತಿರುವುದು ಬಡವರೇ ಆಗಿದ್ದಾರೆ. ಈ ವೇಳೆ ಅವರಿಗೆ ಸಹಾಯವಾಗಿ ಇಂದಿರಾ ಕ್ಯಾಂಟೀನ್​ಗಳ ಮೂಲಕ ಉಚಿತ ಆಹಾರ ನೀಡಲು ಸರ್ಕಾರ ನಿರ್ಧರಿಸಿದೆ.ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಇಡೀ ದಿನ ಇಲ್ಲಿ ಆಹಾರ ಲಭ್ಯವಿರಲಿದೆ. ಇಂದು ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ಧಾರೆ.

ಇದೇ ವೇಳೆ, ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 30 ಫೀವರ್ ಕ್ಲಿನಿಕ್​ಗಳಿಗೆ ಕೆಲ ಇಂದಿರಾ ಕ್ಯಾಂಟೀನ್​ನ ಜಾಗವನ್ನು ಬಳಸಿಕೊಳ್ಳುವ ಚಿಂತನೆಯೂ ಇದೆ. ಲಾಕ್ ಡೌನ್ ಪರಿಸ್ಥಿತಿಯಲ್ಲಿ ಹೋಟೆಲ್​ಗಳು ತೆರೆಯಬಹುದಾದರೂ ಜನರು ಅಲ್ಲಿ ಕೂತು ತಿನ್ನುವಂತಿಲ್ಲ. ಪಾರ್ಸಲ್ ತೆಗೆದುಕೊಂಡು ಮನೆಗೆ ಹೋಗಿ ಆಹಾರ ಸೇವಿಸಬೇಕಾಗುತ್ತದೆ. ಇಂದಿರಾ ಕ್ಯಾಂಟೀನ್​ನಲ್ಲಿ ಯಾವ ರೀತಿ ವ್ಯವಸ್ಥೆ ಮಾಡಲಾಗುತ್ತದೆ ಎಂಬುದು ತಿಳಿದುಬಂದಿಲ್ಲ. ಸದ್ಯಕ್ಕೆ ಈ ಕ್ಯಾಂಟೀನ್​ಗಳಲ್ಲಿ ಜನರಿಗೆ ಸ್ಥಳದಲ್ಲೇ ತಿನ್ನಲು ಅವಕಾಶ ನೀಡಲಾಗಿದೆ.

error: Content is protected !! Not allowed copy content from janadhvani.com