janadhvani

Kannada Online News Paper

ಕೊಲ್ಲಿ ದೇಶದಲ್ಲಿ ಜುಮಾ ನಮಾಝ್ ಇಲ್ಲದ ಸಂಭವ ಇದೇ ಮೊದಲಲ್ಲ

ದುಬೈ: ಕೊಲ್ಲಿ ರಾಷ್ಟಗಳ ಹಲವು ಕಡೆ ಜುಮಾ ನಮಾಝ್ ಇಲ್ಲದೆ ಒಂದು ಶುಕ್ರವಾರವು ಹಾದುಹೋಯಿತು. ಇತಿಹಾಸದಲ್ಲಿ ಇದು ಮೊದಲ ಸಂಭವವೇನೂ ಅಲ್ಲ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಿಜ್ರಾ 448 ರಲ್ಲಿ ಹಲವಾರು ತಿಂಗಳುಗಳ ಕಾಲ ಮಸೀದಿಗಳನ್ನು ಮುಚ್ಚಲಾಗಿದ್ದವು.

700 ವರ್ಷಗಳ ಹಿಂದೆ ಕ್ರಿಸ್ತಶಕ 1340 ರ ದಶಕದಲ್ಲಿ ಬರೆಯಲಾದ ಸಿಯರು ಅಅಲಾಮಿನ್ ನುಬಲಾದ ಗ್ರಂಥ ಕರ್ತರಾದ ಶಂಸುದ್ದೀನ್ ದಹಬಿಯವರು, ಆ ಕಾಲದ ಇತಿಹಾಸಕಾರ ಮತ್ತು ವಿದ್ವಾಂಸರಾಗಿದ್ದು, ಈಜಿಪ್ಟ್ ಮತ್ತು ಸ್ಪೇನ್‌ನಲ್ಲಿ ಬರ ಮತ್ತು ಕಾಯಿಲೆಯಿಂದಾಗಿ ಮಸೀದಿಗಳು ಮುಚ್ಚಲ್ಪಟ್ಟ ಅವಧಿಯನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ.

ಈ ದೇಶಗಳು ಆ ಸಮಯದಲ್ಲಿ ಇಸ್ಲಾಮಿಕ್ ಆಳ್ವಿಕೆಯಲ್ಲಿತ್ತು.

error: Content is protected !! Not allowed copy content from janadhvani.com