janadhvani

Kannada Online News Paper

ಕೊರೋನಾ ವೈರಸ್ ಎಲ್ಲಿ ? ಎಷ್ಟು ದಿನ ಬಾಕಿ ಉಳಿಯುತ್ತೆ?

ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,227 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 7,970 ಏರಿಕೆಯಾಗಿದೆ. 1,98,318 ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ವೈರಸ್ ಎಷ್ಟು ದಿನ ಜೀವಂತ ಇರಲಿದೆ ಎನ್ನುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಕೊರೋನಾ ವೈರಸ್​ನ ಜೀವಿತಾವಧಿ ಎಷ್ಟು ದಿನ ಗೊತ್ತಾ?; ಇಲ್ಲಿದೆ ಆತಂಕಕಾರಿ ವಿಚಾರ

ಕೊರೋನಾ ವೈರಸ್ ಇರುವ ವ್ಯಕ್ತಿ ಕೆಮ್ಮಿದಾಗ ಎಂಜಲಿನ ಮೂಲಕ ವೈರಸ್ ವರ್ಗಾವಣೆಗೊಳ್ಳುತ್ತದೆ. ಈ ಎಂಜಲು ಯಾವುದಾದರೂ ವಸ್ತುವಿನ ಮೇಲೆ ಬಿದ್ದರೆ ಅಲ್ಲಿಗೆ ಕೊರೋನಾ ವೈರಸ್ ಹಸ್ತಾಂತರಗೊಳ್ಳುತ್ತದೆ. ಹೀಗೆ ವಸ್ತುವಿನ ಮೇಲೆ ಬಿದ್ದ ಕೊರೋನಾ ವೈರಸ್​ 2-3 ದಿನ ಬದುಕಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಭೀಕರ ವೈರಸ್​ ಪ್ಲಾಸ್ಟಿಕ್ ಹಾಗೂ ಸ್ಟೀಲ್ ಮೇಲೆ 2-3 ದಿನ, ಕಾರ್ಡ್​ಬೋರ್ಡ್ ಮೇಲೆ 24 ಗಂಟೆ ಜೀವಿತಾವಧಿ ಹೊಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ. ಕೊರೋನಾ ವ್ಯಕ್ತಿ ಸೀನಿದರೆ ಈ ವೈರಸ್ ಗಾಳಿಯೊಂದಿಗೆ ಬೆರೆಯುತ್ತದೆ. ಗಾಳಿಯಲ್ಲಿ ಈ ವೈರಸ್ 2-3 ಗಂಟೆ ಉಳಿದುಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com