janadhvani

Kannada Online News Paper

ದೋಹಾ: ಭಾರತೀಯರಿಗೆ ತಾತ್ಕಾಲಿಕವಾಗಿ ಖತರ್ ಪ್ರವಾಸವನ್ನು ನಿಷೇಧಿಸಲಾಗಿದೆ. ಕೋವಿಡ್-19 ಪ್ರಸರಣವನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ಎನ್ನಲಾಗಿದೆ. ಭಾರತದಿಂದ ಖತರ್‌ಗೆ ಎಲ್ಲಾ ಪ್ರಯಾಣವನ್ನು ನಿಷೇಧಿಸಲಾಗಿದ್ದು, ವೀಸಾದಲ್ಲಿ ಊರಿಗೆ ತೆರಳಿದವರು ಮತ್ತು ಹೊಸತಾಗಿ ಆಗಮಿಸುವವರು ಸೇರಿದಂತೆ ಎಲ್ಲಾ ರೀತಿಯ ಪ್ರಯಾಣಿಕರಿಗೆ ಈ ನಿಷೇಧವು ಅನ್ವಯಿಸುತ್ತದೆ.

ಮುಂದಿನ ಸೂಚನೆ ಬರುವವರೆಗೆ ನಿಷೇಧ ಜಾರಿಯಲ್ಲಿರಲಿದೆ. ಭಾರತ ಸೇರಿದಂತೆ 14 ದೇಶಗಳ ಪ್ರಜೆಗಳಿಗೆ ನಿಷೇಧ ಜಾರಿಯಲ್ಲಿದ್ದು, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಫಿಲಿಪೈನ್ಸ್, ಇರಾನ್, ಇರಾಕ್, ಲೆಬನಾನ್, ದಕ್ಷಿಣ ಕೊರಿಯಾ, ಥೈಲ್ಯಾಂಡ್, ನೇಪಾಳ, ಈಜಿಪ್ಟ್, ಚೀನಾ ಮತ್ತು ಸಿರಿಯಾ ದೇಶಗಳ ಪ್ರಜೆಗಳಿಗೆ ಅನ್ವಯಿಸುತ್ತದೆ.

error: Content is protected !!
%d bloggers like this: