ಕಾರ್ಯಕರ್ತರೇ . . ರಾಷ್ಟ್ರರಾಜಧಾನಿಯಲ್ಲಿ ಶಾಂತಿಯ ಪ್ರತಿಭಟನೆಯನ್ನು ಹತ್ತಿಕ್ಕಲು ಹಿಂಸೆಯ ಮಾರ್ಗವನ್ನು ಕಂಡುಕೊಂಡಿರುವ ಕೆಲವು ಕುದ್ರ ಶಕ್ತಿಗಳು ರಾಜಧಾನಿ ನಗರಿಯ ಅಲ್ಪಸಂಖ್ಯಾತರ ಮೇಲೆ ತೀವ್ರವಾದ ದೌರ್ಜನ್ಯ ಹಾಗೂ ಹತ್ಯಾಕಾಂಡವನ್ನು ನಡೆಸಿದ್ದು ಕೇಂದ್ರ ಸರಕಾರ ಇದರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ .
Oಕೇಂದ್ರ ಸರಕಾರದ ಅಧೀನದಲ್ಲಿರುವ ದೆಹಲಿ ಪೊಲೀಸರು ಈ ಹಿಂಸಾಚಾರಗಳ ಮುಂದೆ ಮೂಕ ಪ್ರೇಕ್ಷಕರಾಗಿದ್ದು ರಾಷ್ಟ್ರ ರಾಜಧಾನಿ ಹೊತ್ತಿ ಉರಿಯುತ್ತಿದೆ . ಕೇಂದ್ರದ ಈ ಮೌನದ ವಿರುದ್ದ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವುಳ್ಳ ದೇಶದ ಭವಿಷ್ಯದಲ್ಲಿ ನಿರೀಕ್ಷೆಯುಳ್ಳ ಪ್ರತಿಯೊಬ್ಬ ಪ್ರಜೆಯೂ ಬೀದಿಗಿಳಿಯ ಬೇಕಾದ ಅನಿವಾರ್ಯತೆಯಿದೆ .
ಈ ನಿಟ್ಟಿನಲ್ಲಿ SSF ಈಶ್ವರಮಂಗಿಲ ಸೆಕ್ಟರ್ ಪೋಸ್ಟರ್ ಪ್ರದರ್ಶನ ನಡೆಸಿ ಪ್ರತಿರೋಧವನ್ನು ವ್ಯಕ್ತಪಡಿಸಿದರು.
ಅಬ್ದುಲ್ ಅಝೀಝ್ ಮಿಸ್ಬಾಹಿ ಉಸ್ತಾದ್ ರವರ ನೇತ್ರತ್ವದಲ್ಲಿ ನಾಡಿನಲ್ಲಿ ಶಾಂತಿ ನೆಲೆಸಲು ವಿಶೇಷವಾಗಿ ಪ್ರಾರ್ಥಿಸಲಾಯಿತು. ಎಲ್ಲಾ ಶಾಖೆಗಳಲ್ಲಿಯೂ ಪೋಸ್ಟರ್ ಪ್ರದರ್ಶನ ನಡೆಸಿ ಪ್ರತಿರೋಧ ವ್ಯಕ್ತಪಡಿಸಲಿದೆ ಎಂದು ಸೆಕ್ಟರ್ ಅಧ್ಯಕ್ಷರು ಅಬೂಬಕ್ಕರ್ ಸ-ಅದಿ ಅಲ್-ಲತೀಫಿ ಪಮ್ಮಲೆ ತಿಳಿಸಿದರು ಕಾರ್ಯದರ್ಶಿ ನಾಸಿರ್ ಕುಕ್ಕಾಜೆ. ಕೋಶಾಧಿಕಾರಿ ಸಂಶುದ್ದಿನ್ ಹನೀಫಿ ಮಿನಾವು ಹಾಗೂ ಸೆಕ್ಟರ್ ಕಾರ್ಯಕಾರಿ ಸದಸ್ಯರಾದ ಹುಸೈನ್ ಜೌಹರಿ. ಶಿಹಾಬುದ್ದಿನ್ ಸಖಾಫಿ. ಇರ್ಫಾನ್ ಮಾಡನ್ನೂರ್. ನೌಫನ್ ಮಾಡನ್ನೂರ್ ಹಾಗೂ ಎಸ್, ವೈ,ಎಸ್.ಎಸ್, ಎಸ್ ,ಎಫ್. ಕಾರ್ಯಕರ್ತರು ಉಪಸ್ಥಿತರಿದ್ದರು.