janadhvani

Kannada Online News Paper

SSF ತಂಬಿನಮಕ್ಕಿ ಯುನಿಟ್ ಇದರ ವಾರ್ಷಿಕ ಮಹಾ ಸಭೆಯು ತಂಬಿನಮಕ್ಕಿ ದಾರುಲ್ ಹುದಾ ಮದ್ರಸಾದಲ್ಲಿ ನಡೆಯಿತು.

ನಿರ್ದೇಶಕರಾಗಿ ಅಯ್ಯೂಬ್ ತಂಬಿನಮಕ್ಕಿ, ಅಧ್ಯಕ್ಷರಾಗಿ ಅನ್ಸಾರ್ ಸ‌ಅದಿ ತಂಬಿನಮಕ್ಕಿ, ಉಪಾಧ್ಯಕ್ಷರಾಗಿ ಮುಸ್ತಫಾ ಖಾದಿರಿ ಕಳಂಜ ಪುನರಾಯ್ಕೆಯಾದರು. ಕಾರ್ಯದರ್ಶಿಯಾಗಿ ರಿಯಾನ್ ಸ‌ಅದಿ ಅಗಲ್ಪಾಡಿ, ಖಜಾಂಜಿಯಾಗಿ ಸ್ವಬಾಹ್ ತಂಬಿನಮಕ್ಕಿ, ಜೊತೆಕಾರ್ಯದರ್ಶಿಯಾಗಿ ಸಾಬಿತ್ ಪಂಜಿಗಾರ್‌ರನ್ನು ಆಯ್ಕೆಮಾಡಲಾಯಿತು. ಅಬ್ದುರ್ರಹ್ಮಾನ್ ಸಖಾಫಿ, ಮುನೀರ್ ಹನೀಫಿ, ಮನ್ಸೂರ್ ತಂಬಿನಮಕ್ಕಿ, ಸಾಬಿತ್ ತಂಬಿನಮಕ್ಕಿ, ಅಫ್ರೀದ್ ಪಂಜಿಗಾರ್‌ರನ್ನು ಸದಸ್ಯರನ್ನಾಗಿ ಆರಿಸಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ನಮ್ಮನ್ನಗಲಿದ ಗಣ್ಯ ವ್ಯಕ್ತಿಗಳ ಮೇಲೆ ತಹ್ಲೀಲ್ ಸಮರ್ಪಣೆ ನಡೆಸಲಾಯಿತು. ಅಬ್ದುರ್ರಹ್ಮಾನ್ ಸಖಾಫಿಯವರ ನೇತೃತ್ವದಲ್ಲಿ ನಡೆದ ಸಭೆಯನ್ನು ರಿಯಾನ್ ಸ‌ಅದಿ ಸ್ವಾಗತಗೈದು, ಮುನೀರ್ ಹನೀಫಿ ವಂದಿಸಿದರು. ಪ್ರಸ್ತುತ ಸಭೆಯಲ್ಲಿ ಸೆಕ್ಟರ್ ನಾಯಕರು ಉಪಸ್ಥಿತರಿದ್ದರು.

error: Content is protected !!
%d bloggers like this: