janadhvani

Kannada Online News Paper

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ: ಎಸ್ಸೆಸ್ಸೆಫ್ ಖಂಡನೆ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಿರಂತರ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ವಿಡಿಯೋ ಸಂದೇಶ ಪ್ರಕಟಿಸುತ್ತಾ, ಪ್ರವಾದಿ ಯವರನ್ನು ನಿಂದನೆ ಮಾಡುವ ಮೂಲಕ ಸಾಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು‌ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ಅಲ್ ಮದನಿಯವರು ಆಗ್ರಹಿಸಿದ್ದಾರೆ.

ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವಂತಹ ನಡೆಯು ಯಾರಿಂದ ಉಂಟಾದರೂ ಖಂಡನೀಯ. ಯಾವುದೇ ಧರ್ಮೀಯರ ಗೌರವಿಸಲ್ಪಡುವ ವಿಚಾರಗಳನ್ನು ಗೇಲಿ ಮಾಡುವವರಿಗೆ ಪ್ರಚಾರ ಕೊಡದೇ ಅಂತವರನ್ನು ಸಮಾಜವು ಮುಖ್ಯವಾಹಿನಿಯಿಂದ ದೂರ ಇಡಬೇಕೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಪತ್ರಿಕಾಪ್ರಕಟನೆಯಲ್ಲಿ ಅಭಿಪ್ರಾಯಿಸಿದ್ದಾರೆ.

error: Content is protected !! Not allowed copy content from janadhvani.com