ಬೆಂಗಳೂರು,ಫೆ.2: ಪದೇ ಪದೇ ಮತಿಗೆಟ್ಟವರಂತೆ ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆ ನೀಡುವುದರಲ್ಲಿ ನಿಪುಣರಾಗಿರುವ ಸಂಸದ ಅನಂತ ಕುಮಾರ್ ಹೆಗಡೆಯವರು “ನಾನು ಮನಸ್ಸು ಮಾಡಿದರೆ ಇಡೀ ಜಗತ್ತು ಹಿಂದುತ್ವದತ್ತ ಹೊರಳುತ್ತದೆ” ಎಂದು ಗುಡುಗಿದ್ದಾರೆ.
ಕೆಲ ಬ್ರಾಹ್ಮಣ ವಿರೋಧಿಗಳು ಹಿಂದುತ್ವವನ್ನ ವಿರೋಧಿಸುವ ಕಾಯದಲ್ಲಿ ತೊಡಗಿದ್ದಾರೆ. ಬೆಂಗಳೂರಷ್ಟೇ ಅಲ್ಲ ಇಡೀ ಜಗತ್ತನ್ನು ಹಿಂದುತ್ವದ ರಾಜಧಾನಿ ಮಾಡಬೇಕು. ಈ ಕುರಿತು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ಹಿಂದುತ್ವದ ಬಗ್ಗೆ ಅರ್ಥವಿಲ್ಲದ ಗೂಬೆಗಳು ಏನು ಬೇಕಾದರೂ ಮಾಡಲಿ. ಆದರೆ ಈ ಹೆಗಡೆ ಮನಸು ಮಾಡಿದರೆ ನಾಳೆಯೇ ಜಗತ್ತು ಹಿಂದೂತ್ವ ಆಗುತ್ತದೆ ಎಂದು ಗುಡುಗಿದರು.
ಮೊದಲು ಬೆಂಗಳೂರನ್ನು ಹಿಂದುತ್ವದ ರಾಜಧಾನಿ ಮಾಡಬೇಕು. ಹಿಂದೂತ್ವವನ್ನು ಅರ್ಥಮಾಡಿಕೊಳ್ಳಲು ಯೋಗ್ಯತೆ ಇರಬೇಕು. ಪೂರ್ವಾಗ್ರಹಪೀಡಿತ ಪಿಂಡಗಳಿಗೆ ಇತಿಹಾಸ ಗೊತ್ತಿಲ್ಲ. ಹೀಗಾಗಿಯೇ ಏನೋನೋ ಮಾತನಾಡುತ್ತಿವೆ. ಕೆಲವರಿಗೆ ಬ್ರಾಹ್ಮಣರನ್ನು ಕಂಡರೆ ಆಗುವುದಿಲ್ಲ. ಅದಕ್ಕಾಗಿ ಟೀಕೆಮಾಡುತ್ತಾರೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕವಾಗಿ ಹೇಳಿಕೆ ನೀಡಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಮತ್ತೆ ಮತ್ತೆ ಸಾವರ್ಕರ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಿಂದುತ್ವ ಎಂದು ಬಿಜೆಪಿಯವರು ಹೇಳಿದರೆ ಕೆಲವರು ಅದು ವಿರೋಧದ ವಿಚಾರ ಎನ್ನುತ್ತಾರೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಆಗದವರಿಗೆ, ಯೋಗ್ಯತೆಯಿಲ್ಲದವರಿಗೆ ಹಿಂದುತ್ವ ಅರ್ಥವಾಗುವುದಿಲ್ಲ. ಇತಿಹಾಸ ಗೊತ್ತಿಲ್ಲದ ಮೂರ್ಖರು ಈ ದೇಶದಲ್ಲಿದ್ದಾರೆ. ವೇದಗಳಿಗೆ ಚೌಕಟ್ಟು ಹಾಕಲು ಹೋದವರು ಅಜ್ಞಾನಿಗಳು ಎಂದು ಪರೋಕ್ಷವಾಗಿ ಕಾಂಗ್ರೆಸ್ನ್ನು ಕುಟುಕಿದರು.
ಸತ್ಯ ಅರ್ಥ ಆಗಿದ್ದರೂ ಒಪ್ಪಿಕೊಳ್ಳುವ ಶಕ್ತಿ ಅವರಲಿಲ್ಲ. ಅದಕ್ಕಾಗಿ ಆರ್ಯರು ಮಧ್ಯ ಏಷ್ಯಾದಿಂದ ಬಂದವರು ಎಂದು ಪೂರ್ವಾಗ್ರಹ ಪೀಡಿತ ಪಿಂಡಗಳು ಮಾತನಾಡುತ್ತಿವೆ. ಮೂಢರ ಬಗ್ಗೆ ತಾವು ಕಠೋರವಾಗಿಯೇ ಪದ ಪ್ರಯೋಗಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.ಕೆಲವರು ಭ್ರಮೆಯಲ್ಲಿಯೇ ಬದುಕುತ್ತಿದ್ದಾರೆ. ಅಂತವರಿಗೆ ಅನಂತ್ ಹೆಗಡೆ ವಿರೋಧವಾಗಿ ಕಾಣಬಹುದು. ಸಿಎಎ ಬಗ್ಗೆ ಯಾವುದೇ ವಿವಾದವಿಲ್ಲ. ಇದನ್ನು ವಿರೋಧಿಸಿದವರಿಗೂ ಚೆನ್ನಾಗಿ ಗೊತ್ತಿದೆ. ಆದರೂ ಪೂರ್ವಾಗ್ರಹದಿಂದ ವಿರೋಧಿಸುತ್ತಿದ್ದಾರೆ ಎಂದರು. ಉದ್ಯೋಗವಿಲ್ಲದ ಎಡಬಿಡಂಗಿಗಳು ವಿವಾದ ಸೃಷ್ಟಿಸುತ್ತಾರೆ. ಹೀಗಾಗಿಯೇ ರಾಷ್ಟ್ರೀಯತೆಯ ಬಗ್ಗೆಯೇ ದೇಶದಲ್ಲಿ ಚರ್ಚೆಯಾಗುತ್ತಿದೆ. ಹಿಂದೂತ್ವದ ಬಗ್ಗೆ ಅಮೆರಿಕಾಕಕ್ಕೆ ಹೋಗಿ ಮಾತನಾಡಲಿ ನೋಡೋಣ.ಇಂತಹ ವೈಕ್ತಿಗಳು ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂ ಬಗ್ಗೆ ಮಾತನಾಡುವ ಧೈರ್ಯ ತೋರಲಿ ಎಂದು ಸವಾಲು ಹಾಕಿದರು.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ