janadhvani

Kannada Online News Paper

ಸೌದಿ-ಭಾರತದ ನಡುವಿನ ಎಮಿಗ್ರೇಷನ್ ವ್ಯವಸ್ಥೆ ಪರಸ್ಪರ ಜೋಡಣೆ

ರಿಯಾದ್: ಸೌದಿ ಮತ್ತು ಭಾರತದ ನಡುವಿನ ಎಮಿಗ್ರೇಷನ್ ವ್ಯವಸ್ಥೆಯನ್ನು ಪರಸ್ಪರ ಜೋಡಿಸಲಾಗುವುದು ಎಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ.ಔಸಾಫ್ ಸ‌ಈದ್ ಹೇಳಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಸೌದಿ-ಭಾರತ ರಾಜತಾಂತ್ರಿಕ ಸಂಬಂಧ ಪ್ರಗತಿ ಸಾಧಿಸಿದೆ ಎಂದು ಹೇಳಿದ ಅವರು, ಸೌದಿ ಅರೇಬಿಯಾದ ಭಾರತೀಯ ಕೋಸ್ಟ್‌ಗಾರ್ಡ್‌ನ ‘ಸಮುದ್ರ ಪರೇಧಾರ್’ ಹಡಗಿನಲ್ಲಿ ನಡೆದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಉಭಯ ದೇಶಗಳ ವಿವಿಧ ಕ್ಷೇತ್ರಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಸೌದಿ ಅರೇಬಿಯಾ ಭಾರತದ ರಾಯಭಾರಿ ಮಾತನಾಡಿ, ಸೌದಿ-ಭಾರತ ನಡುವೆ ವಲಸೆ ವ್ಯವಸ್ಥೆಯ ಪರಸ್ಪರ ಸಂಪರ್ಕದಿಂದ ಸೌದಿ ಅರೇಬಿಯಾಗೆ ಆಗಮಿಸುವ ಮತ್ತು ಹಿಂದಿರುಗುವ ಭಾರತೀಯರ ವಿವರವನ್ನು ನಿಖರವಾಗಿ ತಿಳಿಯಲು ಸಾಧ್ಯವಿದೆ ಎಂದು ಔಸಾಫ್ ಸ‌ಈದ್ ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಡಗಿನ ಕ್ಯಾಪ್ಟನ್ ಡಿಐಜಿ ಅನ್ವರ್ ಖಾನ್ ಮತ್ತು ರಾಯಭಾರ ರಕ್ಷಣಾ ಅಟಾಚ್ ಕರ್ನಲ್ ಮನೀಶ್ ನಾಗ್ ಪಾಲ್ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸೌದಿ ಅರೇಬಿಯಾದ ಯುಎಸ್ ಕಾನ್ಸುಲ್ ಜನರಲ್, ಬ್ರಿಟಿಷ್ ರಾಯಭಾರ ರಕ್ಷಣಾ ಅಟ್ಯಾಚ್ ಮತ್ತು ಸೌದಿ ನೌಕಾಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ತಿಂಗಳು ಮೂರು ದಿನಗಳ ಭೇಟಿಗಾಗಿ ದಮ್ಮಾಮ್‌ನ ಕಿಂಗ್ ಅಬ್ದುಲ್ ಅಝೀಝ್ ಬಂದರಿಗೆ ತಲುಪಿದ ಹಡಗು,
ಯುಎಇಗೆ ಭೇಟಿ ನೀಡಿದ ನಂತರ ಭಾರತಕ್ಕೆ ಮರಳಲಿದೆ.

error: Content is protected !! Not allowed copy content from janadhvani.com