ದುಬೈ:ಸಸಾಮಾಜಿಕ ತಾಣದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಕ್ಕಾಗಿ ಪಂಚತಾರಾ ಹೋಟೆಲ್ ನ ಮೂವರು ಭದ್ರತಾ ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು, ದುಬೈ ನ್ಯಾಯಾಲಯವು ತಲಾ 5ಲಕ್ಷ ದಿರ್ಹಮ್ ದಂಡ ವಿಧಿಸಿದೆ.
ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳ ಮೂಲಕ 28 ರಿಂದ 34 ವರ್ಷದೊಳಗಿನ ಮೂವರು ಶ್ರೀಲಂಕನ್ನರು ಧರ್ಮವನ್ನು ನಿಂದಿಸಿದ್ದಾರೆ ಎಂದು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಆರೋಪಿಸಿದೆ.
ಇದು ತಾರತಮ್ಯ-ಮತ್ತು ದ್ವೇಷವನ್ನು ಹರಡುವುದರ ವಿರುದ್ಧದ ಕಾನೂನು ಮತ್ತು ಫೆಡರಲ್ ದಂಡ ಸಂಹಿತೆಯ ಅನುಸಾರ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ದಂಡ ವಸೂಲಾದ ಬಳಿಕ ಮೂವರು ಆರೋಪಿಗಳನ್ನು ಗಡೀಪಾರು ಮಾಡುವಂತೆ ದುಬೈ ಪ್ರಾಥಮಿಕ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಳೆದ ವರ್ಷ ಮೇ 19 ರಂದು ಅಲ್ ಬರ್ಷಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೋಟಲ್ ಉದ್ಯೋಗಸ್ಥರು ಈ ರೀತಿಯ ಪೋಸ್ಟ್ ಗಳನ್ನು ಹರಿಯಬಿಟ್ಟಿದ್ದಾರೆಂದು ಅರಿತ ಹೋಟೆಲ್ ಆಡಳಿತವರ್ಗವು ಆಂತರಿಕ ಅನ್ವೇಷಣೆ ನಡೆಸಿತ್ತು.ತನಿಖೆಗೊಳಪಡಿಸಿದಾಗ ಇವರು ತಪ್ಪೊಪ್ಪಿಕೊಂಡಿದ್ದರು. ತದನಂತರ ಇವರನ್ನು ಪೋಲೀಸರಿಗೆ ಹಸ್ತಾಂತರಿಸಲಾಗಿತ್ತು.
ಪ್ರಾಸಿಕ್ಯೂಷನ್ ವಾರಂಟ್‌ನೊಂದಿಗೆ,ಅವರ ವಾಸ ಸ್ಥಳವನ್ನು ತಪಾಸಣೆ ನಡೆಸಿ,ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಪೋಲೀಸರು ವಶಪಡಿಸಿಕೊಂಡರು.
ಮೂವರು ಆರೋಪಿಗಳು ಅನುಚಿತ ಸಂದೇಶಗಳನ್ನು ಮತ್ತು ಚಿತ್ರಗಳನ್ನು ತಮ್ಮ ಖಾತೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವುದಾಗಿ ಪ್ರಾಸಿಕ್ಯೂಷನ್ ತನಿಖೆಯ ಸಮಯದಲ್ಲಿ,ಆರೋಪವನ್ನು ಒಪ್ಪಿಕೊಂಡಿದ್ದು, ಆರೋಪಿಗಳು ಕಾನೂನು ಗಡುವಿನೊಳಗೆ ಮೇಲ್ಮನವಿ ಸಲ್ಲಿಸದಕಾರಣ ಈಗಿನ ನ್ಯಾಯಾಂಗ ತೀರ್ಪು ಅಂತಿಮವಾಗಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ