ಯುಎಇ ನ್ಯಾಯಾಲಯದ ತೀರ್ಪು, ಭಾರತದಲ್ಲಿ ಅನುಷ್ಠಾನ

ಅಬುಧಾಬಿ: ಯುಎಇಯ ನ್ಯಾಯಾಲಯಗಳು ಸಿವಿಲ್ ಪ್ರಕರಣಗಳಲ್ಲಿ ಹೊರಡಿಸುವ ತೀರ್ಪುಗಳನ್ನು ಭಾರತದಲ್ಲಿ ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಹಣವ್ಯವಹಾರ ಸಂಬಂಧಿಸಿದ ಅರೋಪಿತ ಅನಿವಾಸಿ ಭಾರತೀಯರು ಊರಿಗೆ ಮರಳಿದರೂ ಯುಎಇ ನೀಡಿರುವ ತೀರ್ಪಿನ ಶಿಕ್ಷೆಯು ಊರನಲ್ಲೂ ಜಾರಿಯಾಗಲಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನ್ಯಾಯಾಲಯಗಳ ತೀರ್ಪುಗಳನ್ನು, ಹೊಸ ಅಧಿಸೂಚನೆಯಡಿಯಲ್ಲಿ ಭಾರತದ ಜಿಲ್ಲಾ ನ್ಯಾಯಾಲಯಗಳ ತೀರ್ಪುಗಳಾಗಿ ಪರಿಗಣಿಸಲಾಗುತ್ತದೆ.ಯುಎಇಯಲ್ಲಿ ಹೊರಡಿಸಲಾದ ತೀರ್ಪನ್ನು ಜಾರಿಗೆ ತರಲು ಊರಿನ ಮುನ್ಸಿಫ್ ನ್ಯಾಯಾಲಯದಲ್ಲಿ ಕಕ್ಷಿದಾರರು ಅರ್ಜಿಯನ್ನು ಸಲ್ಲಿಸಬಹುದು.

ಯುಎಇ ಫೆಡರಲ್ ಸುಪ್ರೀಂ ಕೋರ್ಟ್, ಅಬುಧಾಬಿ, ಫೆಡರಲ್, ಶಾರ್ಜಾ, ಅಜ್ಮಾನ್, ಉಮ್ ಅಲ್-ಕುವೈನ್ ಮತ್ತು ಫುಜೈರಾದಲ್ಲಿನ ಮೇಲ್ಮನವಿ ನ್ಯಾಯಾಲಯಗಳು, ಅಬುಧಾಬಿ ನ್ಯಾಯ ಇಲಾಖೆ, ದುಬೈ ನ್ಯಾಯಾಲಯ, ರಾಸ್ ಅಲ್ ಖೈಮಾ ನ್ಯಾಯ ಇಲಾಖೆ, ಅಬುಧಾಬಿ ಜಾಗತಿಕ ಮಾರುಕಟ್ಟೆ ನ್ಯಾಯಾಲಯ, ದುಬೈ ಅಂತರರಾಷ್ಟ್ರೀಯ ಹಣಕಾಸು ಕೇಂದ್ರ ನ್ಯಾಯಾಲಯಗಳ ತೀರ್ಪುಗಳನ್ನು ಈ ರೀತಿ ಕಾರ್ಯಗತಗೊಳಿಸ ಬಹುದು. ಇದುವರೆಗೆ ಭಾರತದಲ್ಲಿ ನ್ಯಾಯಾಂಗ ನಿರ್ಧಾರಗಳನ್ನು ಕೈಗೊಳ್ಳುವ ವಿದೇಶಗಳ ಪಟ್ಟಿಯಲ್ಲಿ ಯುಎಇ ಒಳಪಟ್ಟಿರಲಿಲ್ಲ.

ಈ ಹಿಂದೆ, ಸ್ಥಳೀಯ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಪ್ರತ್ಯೇಕ ದಾವೆ ಸಲ್ಲಿಸಬೇಕಾಗಿತ್ತು. ಹೊಸ ಸುಗ್ರೀವಾಜ್ಞೆಯೊಂದಿಗೆ, ಕಕ್ಷಿದಾರರಿಗೆ ನೇರವಾಗಿ ಊರಿನಲ್ಲಿ ತೀರ್ಪು ಪಡೆಯಲು ಅವಕಾಶವಿದೆ.

Leave a Reply

Your email address will not be published. Required fields are marked *

error: Content is protected !!