janadhvani

Kannada Online News Paper

ಉಳ್ಳಾಲ,ಜ.20: ಕೇಂದ್ರ ಸರಕಾರ ಜಾರಿಗೆ ತಂದಿರುವ ಧಾರ್ಮಿಕ ವಿಭಜನೆ ಹಾಗೂ ಅಸಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRC, NPR ವಿರುದ್ಧ ಬೃಹತ್ ಪ್ರತಿಭಟನೆಯು ಇಂದು ಕಿನ್ಯಾ ಬೆಳರಿಂಗೆಯಲ್ಲಿ ಅಪರಾಹ್ನ 2 ಗಂಟೆಗೆ ನಡೆಯಲಿದೆ.

ಕಿನ್ಯಾ SYS, SKSSF, SSF ಇದರ ನೇತೃತ್ವದಲ್ಲಿ ಬೆಳರಿಂಗೆ ಮರ್ಹೂಮ್ ಖಾಝಿ CH ಇಬ್ನುಖುತುಬಿ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮತ್ತು ಹೋರಾಟಗಾರ ಪಿ.ವಿ.ಮೋಹನ್ ಮಂಗಳೂರು ಮುಖ್ಯಭಾಷಣ ನಡೆಸಲಿದ್ದಾರೆ.

ಭಾರತದ ಘಣವೆತ್ತ ಜಾತ್ಯಾತೀತ ಪರಂರೆಯನ್ನು ಸಂರಕ್ಷಿಸಲು,ಕೇಂದ್ರ ಸರಕಾರದ ಕರಾಳ ಕಾನೂನು ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!
%d bloggers like this: