ರಿಯಾದ್: ಸೌದಿಯಲ್ಲಿ ಕೆಲಸದ ವೀಸಾದಲ್ಲಿರುವ ವಿದೇಶೀ ಪ್ರಜೆಗಳಿಗೆ ನೀಡಲಾದ ಸೌದಿ ಮರು ಪ್ರವೇಶ ವೀಸಾವನ್ನು ಉಪಯೋಗಿಸದಿದ್ದಲ್ಲಿ ಕಿಸೆಗೆ ಕತ್ತರಿ ಬೀಳಲಿದೆ . ಮರು ಪ್ರವೇಶದ ವಿಸಾ ಪಡೆದ ನಂತರ ದೇಶವನ್ನು ತೊರೆಯದಿದ್ದರೆ, ವೀಸಾವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ.
ಆನ್‌ಲೈನ್ ಪೋರ್ಟಲ್ ಆದ ಅಬ್ಶೀರ್ ಮೂಲಕ ಮರು ಪ್ರವೇಶವನ್ನು ರದ್ದುಗೊಳಿಸಬೇಕು ಎಂದು ಸೌದಿ ಪಾಸ್‌ಪೋರ್ಟ್ ನಿರ್ದೇಶನಾಲಯ (ಜವಾಝಾತ್ ) ಪ್ರಕಟಿಸಿದೆ. ಮತ್ತೊಮ್ಮೆ ಮರು ಪ್ರವೇಶ ವೀಸಾ ಬಯಸಿದರೆ, ಮತ್ತೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮರು ಪ್ರವೇಶ ವೀಸಾ ಪಡೆದ ನಂತರ ಯಾವುದೇ ಕಾರಣಕ್ಕೂ ದೇಶವನ್ನು ಬಿಡಲು ಸಾಧ್ಯವಾಗದಿದ್ದರೆ, ತಕ್ಷಣವೇ ರದ್ದುಮಾಡಲು ಮರೆಯದಿರಿ. ದೇಶವನ್ನು ತೊರೆಯ ಬೇಕಾದ ಕೊನೆಯ ಗಡುವಿನ ಮೊದಲು ವೀಸಾವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ, ದೊಡ್ಡ ಮಟ್ಟದ ದಂಡವನ್ನು ಪಾವತಿಸಬೇಕಾಗುತ್ತದೆ.
ಒಮ್ಮೆ ನೀಡಿದ ಮರು ಪ್ರವೇಶ ವೀಸಾದಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಲು ಅಥವಾ ವಿಸ್ತರಿಸಲು ಸಾಧ್ಯವಿಲ್ಲ. ನಿಗದಿತ ಸಮಯದೊಳಗೆ ದೇಶವನ್ನು ಬಿಡಲು ಸಾಧ್ಯವಾಗದಿದ್ದರೆ, ಮರು ಪ್ರವೇಶ ವೀಸಾವನ್ನು ರದ್ದುಗೊಳಿಸುವುದು ಮತ್ತು ಅಗತ್ಯವಿದ್ದಾಗ ಹೊಸ ಮರು ಪ್ರವೇಶ ವೀಸಾಕ್ಕೆ ಅರ್ಜಿ ಸಲ್ಲಿಸುವುದು ಒಂದೇ ಆಯ್ಕೆಯಾಗಿದೆ.
ಮರು ಪ್ರವೇಶವನ್ನು ರದ್ದುಗೊಳಿಸಿದ ನಂತರ ಈ ಹಿಂದೆ ಪಾವತಿಸಿದ ಯಾವುದೇ ಶುಲ್ಕದ ಮರುಪಾವತಿ ಮಾಡಲಾಗುವುದಿಲ್ಲ. ಮರು ಪ್ರವೇಶ ವೀಸಾವನ್ನು ಉದ್ಯೋಗದಾತರ ಖಾತೆಯ ಮೂಲಕ ಜವಾಝಾತ್‌ನ ಆನ್‌ಲೈನ್ ಸೇವೆ ಅಬ್ಶೀರ್ ಮೂಲಕ ರದ್ದುಗೊಳಿಸಬೇಕು ಎಂದು ನಿರ್ದೇಶನಾಲಯ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ