janadhvani

Kannada Online News Paper

ಜಿದ್ದಾ: ಕಳೆದ ಐದು ತಿಂಗಳಲ್ಲಿ ಸೌದಿ ಅರೇಬಿಯಾ ಉಮ್ರಾ ಯಾತ್ರಾರ್ಥಿಗಳಿಗೆ 29,13,170 ಪ್ರವೇಶ ವೀಸಾಗಳನ್ನು ನೀಡಿದ್ದು, ಇತ್ತೀಚಿನ ಮಾಹಿತಿ ಪ್ರಕಾರ, 25,95,830 ಯಾತ್ರಿಕರು ಉಮ್ರಾ ನಿರ್ವಹಿಸಲು ದೇಶಕ್ಕೆ ಆಗಮಿಸಿದ್ದಾರೆ. ಈ ಪೈಕಿ 22,10,041 ಜನರು ಉಮ್ರಾ ಕರ್ಮವನ್ನು ನಿರ್ವಹಿಸಿ ಸ್ವದೇಶಕ್ಕೆ ಮರಳಿರುವುದಾಗಿ ಅಂಕಿಅಂಶಗಳು ತಿಳಿಸಿವೆ.

ಒಟ್ಟು 24,37,148 ಯಾತ್ರಿಕರು ವಿಮಾನದ ಮೂಲಕ ಆಗಮಿಸಿದ್ದರು. ರಸ್ತೆ ಪ್ರವೇಶ ಕೇಂದ್ರಗಳ ಮೂಲಕ ಒಟ್ಟು 1,47,965 ಜನರು ಮತ್ತು ಸಮುದ್ರದ ಮೂಲಕ 10,717 ಜನರು ಆಗಮಿಸಿದ್ದಾರೆ. ಕಳೆದ ಐದು ತಿಂಗಳಲ್ಲಿ ಅತಿ ಹೆಚ್ಚು ಉಮ್ರಾ ಯಾತ್ರಾರ್ಥಿಗಳು ಪಾಕಿಸ್ತಾನದಿಂದ ಬಂದಿದ್ದಾರೆ. 6,10,880 ಪಾಕಿಸ್ತಾನಿ ಪ್ರಜೆಗಳು ಉಮ್ರಾ ಝಿಯಾರತ್‌ಗೆ ಬಂದಿದ್ದರೆ, 537,894 ಮಂದಿ ಇಂಡೋನೇಷ್ಯಾದಿಂದ ಬಂದಿದ್ದು, ಅವರು ಎರಡನೇ ಸ್ಥಾನದಲ್ಲಿದ್ದರೆ. ಭಾರತದಿಂದ ಒಟ್ಟು 3,07,066 ಯಾತ್ರಾರ್ಥಿಗಳು ಆಗಮಿಸಿದ್ದು, ಭಾರತವು ಮೂರನೇ ಸ್ಥಾನದಲ್ಲಿದೆ. ಈಜಿಪ್ಟ್, ಮಲೇಷ್ಯಾ, ತುರ್ಕಿ, ಅಲ್ಜೀರಿಯಾ, ಯುಎಇ ಮತ್ತು ಜೋರ್ಡಾನ್ ಮುಂದಿನ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.

error: Content is protected !!
%d bloggers like this: