janadhvani

Kannada Online News Paper

ಗೋಲಿಬಾರ್ ನಲ್ಲಿ ಮಡಿದ ಜಲೀಲ್, ನೌಶೀನ್ ಮನೆಗೆ ಎ.ಪಿ.ಉಸ್ತಾದ್ ಭೇಟಿ

ಮಂಗಳೂರು, ಜ.3: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಡಿ.19ರಂದು ನಗರದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ನಡೆಸಿದ ಗೋಲಿಬಾರ್‌ಗೆ ಬಲಿಯಾದ ಬಂದರ್ ಕಂದಕ ನಿವಾಸಿ ಅಬ್ದುಲ್ ಜಲೀಲ್ ಅವರ ಮನೆಗೆ ಹಾಗೂ ಕುದ್ರೋಳಿಯ ನೌಶಿನ್ ಅವರ ಮನೆಗೆ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಸಂದರ್ಭ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಕಾರ್ಪೊರೇಟರ್ ಲತೀಫ್ ಕಂದುಕ, ಕಾಂಗ್ರೆಸ್ ಮುಖಂಡ ಎನ್.ಎಸ್.ಕರೀಂ, ಅಶ್ರಫ್ ಕಿನಾರ, ವಹಾಬ್‌ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿರಿ...