ಹೊಸದಿಲ್ಲಿ: ಕೇಂದ್ರ ಸರಕಾರ ಮಂಗಳವಾರ ಘೋಷಿಸಿರುವ ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್ ಅಥವಾ ಎನ್ ಪಿಆರ್ ಗೂ ಎನ್ ಆರ್ ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದರೂ, ಸರಕಾರ ಈ ಹಿಂದೆ ನೀಡಿರುವ ಹಲವಾರು ಹೇಳಿಕೆಗಳನ್ನು ಪರಿಶೀಲಿಸಿದರೆ ಗೃಹಸಚಿವರ ಹೇಳಿಕೆ ಗೊಂದಲ ಸೃಷ್ಟಿಸುತ್ತದೆ.
ಸ್ವತಃ ಕೇಂದ್ರ ಸರಕಾರ ಈ ಹಿಂದೆ ನೀಡಿರುವ ಹಲವಾರು ಹೇಳಿಕೆಗಳಲ್ಲಿ ಎನ್ ಪಿಆರ್ ಗೂ ಎನ್‍ಆರ್ ಸಿಗೂ ನಂಟಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಗೃಹ ಸಚಿವಾಲಯ ಈ ಹಿಂದೆ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲೂ ಇದನ್ನೇ ಹೇಳಲಾಗಿದೆ.
►ಪೌರತ್ವ ಕಾಯಿದೆ 1995 ಇದರಡಿಯಲ್ಲಿ ಬರುವ ಪೌರತ್ವ (ನಾಗರಿಕರ ನೋಂದಣಿ ಹಾಗೂ ರಾಷ್ಟ್ರೀಯ ಗುರುತು ಕಾರ್ಡ್ ನೀಡುವಿಕೆ) ನಿಯಮಗಳು 2003 ಇದರಲ್ಲಿ ಎನ್ ಪಿಆರ್ ದೇಶವ್ಯಾಪಿ ಎನ್‍ಆರ್ ಸಿಯತ್ತ ಮೊದಲ ಹೆಜ್ಜೆ ಎಂದು ಹೇಳಿದೆ.
►ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ಸ್ಥಳೀಯ ಭಾರತೀಯ ನಾಗರಿಕರ ರಿಜಿಸ್ಟರ್‍ನಲ್ಲಿ ಎನ್‍ಪಿಆರ್ ಮೂಲಕ ಸೂಕ್ತ ಪರಿಶೀಲನೆ ನಂತರ ಮಾಹಿತಿಯಿರಬೇಕು ಎಂದು ಹೇಳಿದೆ.
►ಇನ್ನೊಂದೆಡೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ 2018-19 ವಾರ್ಷಿಕ ವರದಿಯ 15ನೇ ಅಧ್ಯಾಯದಲ್ಲೂ ಎನ್‍ಆರ್ ಸಿಯನ್ನು ಎನ್ ಪಿಆರ್ ಡಾಟಾ ಮೂಲಕ ಮಾಡಬಹುದು ಎಂದು ಹೇಳಲಾಗಿದೆ. “ಎನ್ ಪಿಆರ್ ಪ್ರಕ್ರಿಯೆಯು ನ್ಯಾಷನಲ್ ರಿಜಿಸ್ಟರ್ ಆಫ್ ಇಂಡಿಯನ್ ಸಿಟಿಜನ್ಸ್ (ಎನ್‍ಆರ್‍ಐಸಿ) ರಚನೆಯತ್ತ ಪ್ರಥಮ ಹೆಜ್ಜೆಯಾಗಿದೆ” ಎಂದು ಇದರಲ್ಲಿ ಹೇಳಲಾಗಿದೆ.
►2014ರಲ್ಲಿ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಕೂಡ ಎನ್ ಪಿಆರ್ ಹಾಗೂ ಎನ್‍ಆರ್ ಸಿ ನಡುವಿನ ನಂಟಿನ ಬಗ್ಗೆ ಹೇಳಿದ್ದಾರೆಂದು ಕಾಂಗ್ರೆಸ್ ಈಗಾಗಲೇ ಉಲ್ಲೇಖಿಸಿದೆ. ರಿಜಿಜು ತಮ್ಮ ಲಿಖಿತ ಉತ್ತರದಲ್ಲಿ ಹೀಗೆ ಹೇಳಿದ್ದರು- “ಎನ್ ಪಿಆರ್‍ಗಾಗಿ ಡೆಮಾಗ್ರಾಫಿಕ್ ಡಾಟಾ 2010ರಲ್ಲಿಯೇ ಸಂಗ್ರಹಿ 118 ಕೋಟಿ ನಾಗರಿಕರ ಇಲೆಕ್ಟ್ರಾನಿಕ್ ಡಾಟಾ ಬೇಸ್ ಸಿದ್ಧಪಡಿಸಲಾಗಿದೆ. ಸರಕಾರ ಎನ್ ಪಿಆರ್ ಅಡಿ ಸಂಗ್ರಹಿಸಿದ ಮಾಹಿತಿಯನ್ನು ಬಳಸಿ ನಾಗರಿಕರ ಪೌರತ್ವ ಸ್ಥಾನಮಾನವನ್ನು ದೃಢೀಕರಿಸಲು ಎನ್‍ಆರ್ ಸಿ ರಚಿಸಲು ನಿರ್ಧರಿಸಿದೆ” ಎಂದು ರಿಜ್ಜು ಹೇಳಿದ್ದರು.
►ನವೆಂಬರ್ 29, 2014ರಂದೂ ಅವರು ರಾಜ್ಯಸಭೆಯಲ್ಲಿ ಎನ್ ಪಿಆರ್ ಪ್ರಕ್ರಿಯೆ ಎನ್‍ಆರ್ ಸಿಯತ್ತ ಪ್ರಥಮ ಹೆಜ್ಜೆ ಎಂದು ಹೇಳಿದ್ದರು.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ