ನವದೆಹಲಿ: ಭಾರತದಲ್ಲಿ ಧಾರ್ಮಿಕ ವಿಭಜನೆಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್, ಅಮಿತ್ ಶಾ ಅವರು ವಿದ್ಯಾರ್ಥಿಯಾಗಿದ್ದಾಗ ಇತಿಹಾಸ ತರಗತಿಯಲ್ಲಿ ಗಮನ ನೀಡುತ್ತಿರಲಿಲ್ಲ ಅನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಮಾಡಿದಾಗ ತೀವ್ರ ವಿರೋಧ ವ್ಯಕ್ತವಾದಾಗ ಮಾತನಾಡಿದ್ದ ಗೃಹ ಸಚಿವ ಅಮಿತ್ ಶಾ, ಈ ದೇಶವನ್ನು ಧಾರ್ಮಿಕತೆಯ ಆಧಾರದಲ್ಲಿ ವಿಭಜನೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದ್ದರು.
ಲೋಕಮಾತ್ ನ್ಯಾಷನಲ್ ಸಭೆಯಲ್ಲಿ ‘ಭಾರತದ ರಾಜಕೀಯದಲ್ಲಿ ಸ್ಥಳೀಯ ಪಕ್ಷಗಳ ಪಾತ್ರ’ದ ಕುರಿತು ಮಾತನಾಡಿದ ತರೂರ್, ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಎರಡು ದೇಶದ ಸಿದ್ಧಾಂತವನ್ನು ಅಪಾರವಾಗಿ ಸಮರ್ಥಿಸಿಕೊಂಡಿದ್ದವು. ಬಹುಪಾಲು ಜನರು ಹಿಂದಿ ಭಾಷೆ ಮಾತನಾಡಬೇಕು, ಹಿಂದುತ್ವ ಪ್ರಚಾರ ಮಾಡಬೇಕು, ಹಿಂದೂಸ್ತಾನವಾಗಬೇಕು ಎಂಬ ಬಿಜೆಪಿಯ ಹೇರಿಕೆಗೆ ಸ್ಥಳೀಯ ಪಕ್ಷಗಳು ಆಳುತ್ತಿರುವ ರಾಜ್ಯಗಳಿಂದ ವಿರೋಧ ಕೇಳಿಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಹಿಂದಿ ಭಾಷೆ ಹೇರಿಕೆಯನ್ನು ದಕ್ಷಿಣ ಭಾರತದ ಜನರು ಒಪ್ಪುವುದಿಲ್ಲ ಎಂದು ಬಿಜೆಪಿಗೆ ಮನದಟ್ಟಾಗಿದೆ. ಇನ್ನು ಹಿಂದುತ್ವ ಅಜೆಂಡಾವನ್ನು ಸಹ ದಕ್ಷಿಣ ಭಾರತದ ಅನೇಕ ಶಾಲೆಗಳಲ್ಲಿ ಒಪ್ಪುವುದಿಲ್ಲ ಎಂದರು.ಇನ್ನು ದೇಶಾದ್ಯಂತ ಬಿಜೆಪಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ನಾಗರಿಕ ದಾಖಲಾತಿ ಸ್ಥಳೀಯ ಪಕ್ಷಗಳಿಂದ ಆಳಲ್ಪಡುತ್ತಿರುವ ರಾಜ್ಯಗಳಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದರು.
ಶಶಿ ತರೂರ್ ಹೇಳಿದ್ದೇನು?: ಅಮಿತಾ ಶಾ ಅವರು ಇತಿಹಾಸದ ತರಗತಿಯಲ್ಲಿ ಪಾಠಕ್ಕೆ ಸಾಕಷ್ಟು ಗಮನ ನೀಡುತ್ತಿರಲಿಲ್ಲ ಎನಿಸುತ್ತದೆ. ಇಡೀ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವೊಂದೇ ಅಖಂಡ ಭಾರತದ ಪ್ರತಿನಿಧಿಯಾಗಿ ನಿಂತುಕೊಂಡಿದ್ದು. ಆಗಿನ ಸಂದರ್ಭದಲ್ಲಿ ಕಾಂಗ್ರೆಸ್ ಗೆ ವಿರುದ್ಧವಾಗಿದ್ದು ಹಿಂದೂ ಮಹಾಸಭಾ ಮಾತ್ರ, ಹಿಂದೂ ಮಹಾಸಭಾ 1935ರಲ್ಲಿ ಹಿಂದೂ ಮತ್ತು ಮುಸ್ಲಿಂರಿಗೆ ಎರಡು ಪ್ರತ್ಯೇಕ ದೇಶ ಬೇಕೆಂದು ನಿರ್ಧರಿಸಿತು, ಇನ್ನು ಮೊಹಮ್ಮದ್ ಆಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಸಹ ಇದೇ ಸಿದ್ಧಾಂತವನ್ನು ಮುಂದಿಟ್ಟಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು 1945ರವರೆಗೆ ಮೌಲಾನಾ ಆಜಾದ್ ಎಂಬ ಮುಸ್ಲಿಂರು ಎಂದು ತರೂರ್ ಇತಿಹಾಸವನ್ನು ವಿವರಿಸಿದರು.
ಬಿಜೆಪಿಯವರು ಪ್ರತಿಯೊಂದಕ್ಕೂ ಕಾಂಗ್ರೆಸ್ ನ ಮೇಲೆ ಆರೋಪ ಮಾಡುತ್ತಾರೆ. ಅದು ಅವರಿಗೆ ಚಾಳಿಯಾಗಿಬಿಟ್ಟಿದೆ. ದೆಹಲಿಯಲ್ಲಿ ನಾಳೆ ಹವಾಮಾನ ಕೆಟ್ಟರೂ ಅದಕ್ಕೆ ಕಾಂಗ್ರೆಸ್ ಮತ್ತು ನೆಹರೂ ಕಾರಣ ಎನ್ನುತ್ತಾರೆ ಎಂದು ತರೂರ್ ಆರೋಪಿಸಿದರು.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ