janadhvani

Kannada Online News Paper

ಮಂಗಳೂರು: ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ದೇಳಿ ಇದರ ಗೋಲ್ಡನ್ ಜೂಬಿಲಿ ಮಹಾ ಸಮ್ಮೇಳನವು ಇದೇ ಬರುವ ಡಿಸೆಂಬರ್ 27,28,29 ದಿನಾಂಕಗಳಲ್ಲಿ ನಡೆಯಲಿದೆ.

ಸಮ್ಮೇಳನದ ಪ್ರಚಾರಾರ್ಥ ಕರ್ನಾಟಕದ ದ.ಕ,ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿನಿಂದ ಡಿಸೆಂಬರ್ 8- 15ರ ತನಕ ಸಂದೇಶ ಯಾತ್ರೆ ನಡೆಯಲಿದ್ದು ಅಲ್ ಮದೀನ ವಿದ್ಯಾ ಸಂಸ್ಥೆ ಮಂಜನಾಡಿಯಲ್ಲಿ ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಚಾಲನೆ ನೀಡಿದರು.
ಅಲ್ ಮದೀನ ವಿದ್ಯಾ ಸಂಸ್ಥೆ ಮುಖ್ಯಸ್ಥ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಸಅದಿಯ್ಯ ಪ್ರೊಫೆಸರ್ ಹಾಗೂ ರಾಜ್ಯ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಕೆ ಪಿ ಹುಸೈನ್ ಸಅದಿ ಕೆಸಿರೋಡ್ ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಯಾತ್ರೆಯ ವಿವರಣೆ ನೀಡಿದರು.ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ವಳವೂರು ಮುಹಮ್ಮದ್ ಸಅದಿ
ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಹಾಜಿ ಉಸ್ಮಾನ್ ಸಅದಿ ಪಟ್ಟೋರಿ ಶುಭಕೋರಿದರು.

ಸಅದಿಯ್ಯ ಗೋಲ್ಡನ್ ಜೂಬಿಲಿ ಪ್ರಚಾರ ಸಮಿತಿಯ ಚೇರ್ ಮಾನ್ ಹಾಜಿ ಅಬ್ದುಲ್ ರಝಾಕ್ ಮಲಾರ್ ಫಂಡ್ ಸಂಗ್ರಹಕ್ಕೆ ಚಾಲನೆ ಕೊಟ್ಟರು. ಮಜ್ಲಿಸುಲ್ ಉಲಮಾಯಿ ಸ್ಸಅದಿಯ್ಯೀನ್ ಕರ್ನಾಟಕ ರಾಜ್ಯ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಜಿಲ್ಲಾಧ್ಯಕ್ಷ ಯೂಸುಫ್ ಸಅದಿ ಮಠ, ಪ್ರಚಾರ ಸಮಿತಿಯ ವರ್ಕಿಂಗ್ ಚೇರ್ಮಾನ್ ಇಸ್ಮಾಯಿಲ್ ಸಅದಿ ಉರುಮಣೆ,ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ತೌಸೀಫ್ ಸಅದಿ ಹರೇಕಳ, ಹನೀಫ್ ಸಅದಿ ಬದ್ಯಾರ್, ಹಾಮಿದ್ ಸಅದಿ ಪೊಯ್ಯತಬೈಲು,
ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟಲಿಕೆ, ಯುವಉದ್ಯಮಿ ಕಲಂದರ್ ಮಂಗಳೂರು,ಸವಾದ್ ತಙಳ್ ಉಜಿರೆ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಸಅದಿಯ್ಯ ವಿಧ್ಯಾರ್ಥಿ ರಶೀದ್ ಕಾಟಿಪಳ್ಳ ಸ್ವಾಗತಿಸಿ ಸಿದ್ದೀಕ್ ಬಾರೆಬೆಟ್ಟು ವಂದಿಸಿದರು

error: Content is protected !!
%d bloggers like this: