ಮಂಗಳೂರು, ನ. 20: ನಗರದ ಪಂಪ್‌ವೆಲ್ ಸಮೀಪದ ಉಜ್ಜೋಡಿಯಲ್ಲಿ ಬುಧವಾರ ಸಂಜೆ ನಡೆದ ಅಪಘಾತದಲ್ಲಿ ಯುವ ವಿದ್ವಾಂಸರಾದ ಹಾಫಿಲ್ ತೌಸೀಫ್ ಅಹ್ಮದ್ ಹಿಮಮಿ ಅಫ್ಳಲ್ ಸಅದಿ ನಿಧನರಾಗಿದ್ದಾರೆ.
ಮೇಲ್ಕಾರ್‌ನ ಅಲಡ್ಕ ಹಮೀದ್ ಎಂಬವರ ಪುತ್ರ ಹಾಗೂ ಪುತ್ತೂರು ಕುಂಬ್ರ ಶೇಖಮಲೆ ಮರ್ಹೂಮ್ ಮಮ್ಮುಂಞಿ ಹಾಜಿಯವರ ಮೊಮ್ಮಗ ತೌಸೀಫ್ ಅಹ್ಮದ್ ಮಂಗಳೂರಿನ ಕಂಕನಾಡಿಯಲ್ಲಿರುವ ತರ್ತೀಲ್ ಖುರ್ ಆನ್ ಅಕಾಡಮಿಯಲ್ಲಿ ಧಾರ್ಮಿಕ ಶಿಕ್ಷಣ ನೀಡಲು ತೆರಳುತ್ತಿರುವ ಸಂದರ್ಭ ಅವರ ಸ್ಕೂಟರಿಗೆ ಖಾಸಗೀ ಬಸ್ಸೊಂದು ಡಿಕ್ಕಿ ಹೊಡದ ಪರಿಣಾಮ ಈ ಅವಘಡ ಸಂಭವಿಸಿದೆ.
ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು, ರಾಷ್ಟ್ರೀರ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆ ದಾರರು ಹಾಗೂ ಬಸ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.ಮೃತ ಹಾಫಿಳ್ ಪತ್ನಿ ಹಾಗೂ ಎರಡು ಮಕ್ಕಳನ್ನು ಅಗಲಿದ್ದಾರೆ.
ಕುರ್ ಆನ್ ಕಂಠಪಾಠ ಮಾಡಿ ಮುಹಿಮ್ಮಾತಿನಲ್ಲಿ ಉನ್ನತ ದರ್ಜೆಯೊಂದಿಗೆ ಹಿಮಮಿ ಪದವಿ ಪಡೆದು ಕಾಸರಗೋಡು ಜಾಮಿಅ ಸಅದಿಯ್ಯಾ ಶರೀಅತ್ ಕಾಲೇಜಿನಿಂದ 2013 ರಲ್ಲಿ ಅಫ್ಲಲ್ ಸಅದಿ ಪದವಿಯನ್ನೂ ಪ್ರಥಮ ದರ್ಜೆಯೊಂದಿಗೆ ಪಡೆದ ತೌಸೀಫ್ ಹಿಮಮಿಯವರು ಕುತ್ತಾರು ಎಚ್ ಎಚ್ ದಅವಾ ಕಾಲೇಜಿನಲ್ಲಿ ಮುದರ್ರಿಸರಾಗಿ ಸೇವೆ ಗೈಯ್ಯುತ್ತಿದ್ದರು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್