ಜಿದ್ದಾ: ದಾರುಲ್ ಇರ್ಷಾದ್ ಮಾಣಿ ಜಿದ್ದಾ ಕಮಿಟಿ ಇದರ ಆಶ್ರಯದಲ್ಲಿ ಇಷ್ಕೇ ರಸೂಲ್ ﷺ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ಜಿದ್ದಾದ ಕೆಸಿಎಫ್ ಭವನದಲ್ಲಿ ನಡೆಯಿತು.
ಸ್ವಲಾತ್ ಮಜ್ಲಿಸ್ ಗೆ ಉಮರ್ ಸಖಾಫಿ ಪರಪ್ಪು ಉಸ್ತಾದರು ನೇತೃತ್ವ ನೀಡಿದರು, ದುಆಃ ವನ್ನು ಸಯ್ಯಿದ್ ಝಕರಿಯ್ಯ ಸಖಾಫಿ ನಾವುಂದ ರವರು ನೆರವೇರಿಸಿ ಕೊಟ್ಟರು.
ಮುತ್ತು ನಬಿ ﷺ ಮದ್ ಹ್ ಮತ್ತು ಬುರ್ದಾ ಬೈತ್ ಆಲಾಪಿಸಲಾಯಿತು. ನಂತರ ಪ್ರೌಢ ಗಾಂಭೀರ್ಯ ಹುಬ್ಬುರ್ರಸೂಲ್ ಫ್ರಭಾಷಣ ಮಾಡಿದ ಉಮ್ಮರ್ ಸಖಾಫಿ ಉಸ್ತಾದರು, ನಬಿ ﷺ ರವರ ಅನುಯಾಯಿಗಳಾಗಿ, ಭಯ ಭಕ್ತಿಯೊಂದಿಗೆ ನಬಿಯವರ ಚರ್ಯೆ ಯನ್ನು ಪಾಲಿಸಿ ಜೀವಿಸಬೇಕೆಂದು ಕರೆ ನೀಡಿದರು.
ನವೆಂಬರ್ ಮೂರರಂದು ಕೆ.ಜಿ.ಎನ್ ಮಿತ್ತೂರು ನಲ್ಲಿ ಉದ್ಘಾಟನೆ ಗೊಳ್ಳಲಿರುವ ನೂತನ ನವೀಕೃತ ಮಸ್ಜಿದ್ ಬದ್ರ್ ರನ್ನು ಉಮರ್ ಸಖಾಫಿ ಉಸ್ತಾದರು ಪ್ರಚಾರ ಪಡಿಸಿ, ಊರಲ್ಲಿರುವ ಎಲ್ಲಾ ಪ್ರವಾಸಿಗಳನ್ನು ಕಾರ್ಯಕ್ರಮಕ್ಕೆ ಶೈಖುನಾ ಝೈನುಲ್ ಉಲಮಾ ಆಹ್ವಾನ ನೀಡಲು ತಿಳಿಸಿದ್ದಾರೆ ಎಂದು ಈ ಸಂದರ್ಭ ಮನವಿ ಮಾಡಿದರು.
ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್, ಅಬ್ದುಲ್ ಹಮೀದ್ ಫೈಝಿ ಉಸ್ತಾದ್, ಇಕ್ಬಾಲ್ ಹಾಜಿ ಉಳ್ಳಾಲ, ಕೆಸಿಎಫ್ ನೇತಾರರು, ಇತರ ಸುನ್ನೀ ಸಂಘ ಸಂಸ್ಥೆಗಳ ನೇತಾರರು ,ಉಮರಾಗಳು ಸೇರಿದಂತೆ ಹಲವಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ