ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಬೆಳ್ತಂಗಡಿ ಡಿವಿಷನ್ ವತಿಯಿಂದ ಹಳೆಬೇರು ಹೊಸಚಿಗುರು ಕಾರ್ಯಕ್ರಮವು ದಿನಾಂಕ 29/09/2019ನೇ ಅದಿತ್ಯವಾರ ಮಧ್ಯಾಹ್ನ 2.00ಗಂಟೆಗೆ ಅನುಗ್ರಹ ಟ್ರೈನಿಂಗ್ ಕಾಲೇಜು ಹಾಲ್ ಬೆಳ್ತಂಗಡಿಯಲ್ಲಿ ಡಿವಿಷನ್ ಅಧ್ಯಕ್ಷರಾದ ನಝೀರ್ ಮದನಿ ಪುಂಜಾಲಕಟ್ಟೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

SYS ಬೆಳ್ತಂಗಡಿ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಸಲಾಂ ತಂಙಳ್ ಪುಂಜಾಲಕಟ್ಟೆ ದುವಾ ನೆರವೇರಿಸಿದರು, ಬೆಳ್ತಂಗಡಿ ಸುನ್ನೀ ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಕಾರ್ಯಕ್ರಮವನ್ನು ಉದ್ಘಾಟಿಸಿದರು.

SSF ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಹಾಫಿಳ್ ಸುಫಿಯಾನ್ ಸಖಾಫಿ ಹಾಗೂ SSF ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷರಾದ MAM ಕಾಸಿಂ ಮುಸ್ಲಿಯಾರ್ ಮಾಚಾರು ಪ್ರಾಸ್ತಾವಿಕ ಭಾಷಣ ಮಾಡಿದರು.ಡಿವಿಷನ್ ಮಾಜಿ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಸಖಾಫಿ ತರಗತಿ ಮಂಡಿಸಿದರು.
ಈ ಸಂದರ್ಭದಲ್ಲಿ ಡಿವಿಷನ್’ಗೆ ದಶಕಗಳಿಂದ ನಾಯಕತ್ವ ನೀಡಿದ ಮಾಜಿ ನಾಯಕರುಗಳಿಗೆ ಸನ್ಮಾನಿಸಲಾಯಿತು. SSF ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ,ಸದಸ್ಯ ಇಕ್ಬಾಲ್ ಮಾಚಾರು,SSF ದ.ಕ ಈಸ್ಟ್ ಝೋನ್ ಅಧ್ಯಕ್ಷರಾದ ಅಯ್ಯೂಬ್ ಮಹ್ ಳರಿ ಕಾವಲ್’ಕಟ್ಟೆ, ಅನುಗ್ರಹ ಸಮೂಹ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ತಲ್’ಹತ್ ಎಂ.ಜಿ, ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾಜಿ ನಾಯಕರುಗಳಾದ ಹಂಝ ಮದನಿ ತೆಂಕ ಕಾರಂದೂರು,ಫಾರೂಕ್ ಸಖಾಫಿ ವೇಣೂರು, ಅಬೂಬಕ್ಕರ್ ಸಮಡೈನ್, ಜಮಾಲುದ್ದೀನ್ ಲತೀಫಿ ಲಾಡಿ, ರಫೀಕ್ ಮುಸ್ಲಿಯಾರ್ ನಾಳ,ಅಶ್ರಫ್ KCF,ನಝೀರ್ ಕಾಂತಿಜಾಲು,ಝೋನ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್,ಸದಸ್ಯ ಸಿದ್ದೀಕ್ ಪರಪ್ಪು,ಡಿವಿಷನ್ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ 5 ಸೆಕ್ಟರ್ ಒಳಗೊಂಡ 50 ಯುನಿಟ್‌ಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
SSF ಬೆಳ್ತಂಗಡಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಝುಬೈರ್ ಶಾಂತಿನಗರ ಸ್ವಾಗತಿಸಿದರು. ಡಿವಿಷನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿ,ಪ್ರಧಾನ ಕಾರ್ಯದರ್ಶಿ ಶರೀಫ್ ನಾವೂರು ಧನ್ಯವಾದವಿತ್ತರು.
✍ಎಂ.ಎಂ.ಉಜಿರೆ















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ