ತ್ವಾಯಿಫ್: ಅಲ್ ಮದೀನಾ ಇಸ್ಲಾಮಿಕ್ ಸಂಸ್ಥೆ ಮಂಜನಾಡಿ ತ್ವಾಯಿಫ್ ಕಮಿಟಿ ಹಾಗೂ ಕೆಸಿಎಫ್ ತ್ವಾಯಿಫ್ ಸೆಕ್ಟರ್ ವತಿಯಿಂದ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಹೆಸರಿನಲ್ಲಿ ಖತ್ಮುಲ್ ಖುರ್ಆನ್, ಜನಾಝ ನಮಾಝ್ ಹಾಗೂ ತಹ್ಲೀಲ್ ಸಮರ್ಪಣೆ ಮಜ್ಲಿಸ್ ದಿನಾಂಕ 31/07/2019 ರಂದು ತ್ವಾಯಿಫ್ ಕೆಸಿಎಫ್ ಭವನದಲ್ಲಿ ಇಕ್ಬಾಲ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತುತ ಮಜ್ಲಿಸ್ ಗೆ ಹನೀಫ್ ಹಿಮಮಿ ಕುಂಡಡ್ಕ ನೇತ್ರತ್ವ ವಹಿಸಿ ಅನುಸ್ಮರಣಾ ಭಾಷಣ ಮಾಡಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಜೀವನ ಶೈಲಿಯ ಕುರಿತು ಉಸ್ತಾದರು ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ಪರಿಚಯಿಸಿದರು. ತ್ವಾಯಿಫ್ ಐಸಿಎಫ್ ದಾಯಿಯವರಾದ ಕಮ್ಮು ಮುಸ್ಲಿಯಾರ್ ಪಂಡಿತರ ಮರಣದೊಂದಿಗೆ ಸಮುದಾಯಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ ಪಂಡಿತರ ಮರಣವು ಲೋಕದ ಮರಣವಾಗಿದೆ ಎಂದು ಸವಿಸ್ತಾರವಾಗಿ ಭಾಷಣ ಮಾಡಿದರು. ಜನಾಝ ನಮಾಝ್ ಗೆ ಇಕ್ಬಾಲ್ ಮದನಿಯವರು ನೇತೃತ್ವ ವಹಿಸಿದರು.

ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಝುಹ್ರಿ ಉಜಿರೆ, ಖಲೀಲ್ ನಈಮಿ ತಿರುವನಂತಪುರಂ, ನಾಸಿರ್ ಸಖಾಫಿ, ಬಶೀರ್ ಮುಸ್ಲಿಯಾರ್, ಮಲ್ಜಹ್ ಆರ್ಗನೈಸರ್ ಖಾಲಿದ್ ಕಬಕ ಅಲ್ ಮದೀನಾ ಮಂಜನಾಡಿ ತ್ವಾಯಿಫ್ ಘಟಕದ ಕಾರ್ಯದರ್ಶಿ ಸಿದ್ದೀಕ್ ಕರೋಪಾಡಿ ಕೋಶಾಧಿಕಾರಿ ಅರಬಿ ಕುಂಞಿ ಬೀರಿ ಕೆಸಿಎಫ್ ಹವಯ್ಯ ಯುನಿಟ್, ಬಲದ್ ಯುನಿಟ್ ಹಾಗೂ ಶಿಹಾರ್ ಯುನಿಟ್ ಕಾರ್ಯಕರ್ತರು ದಾರುಲ್ ಇರ್ಶಾದ್ ತ್ವಾಯಿಫ್ ಕಮಿಟಿ, ಡಿಕೆಎಸ್ಸಿ ತ್ವಾಯಿಫ್ ಘಟಕದ ನೇತಾರರು ಹಾಗೂ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕರ್ತರು ಭಾಗವಹಿಸಿದ್ದರು
ವರದಿ: ಹಿಮಮಿ ತ್ವಾಯಿಫ್















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ