ಮಕ್ಕಾ: ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಹರಮ್ ಯೂನಿಟ್ ವತಿಯಿಂದ H.V.C ಹಜ್ಜ್ ಸ್ವಯಂ ಸೇವಕರಿಗೆ ಬಹು| ಶಾಫಿ ಸಖಾಫಿ ಮುಂಡಂಬರ ಕೇರಳ ಇವರು ಬಹಳ ಸಂಕ್ಷಿಪ್ತವಾಗಿ ಹಜ್ಜ್ ತರಗತಿಯನ್ನು ನಡೆಸಿಕೊಟ್ಟರು.
ಭಾರತ ಹಾಗೂ ವಿಶ್ವದ ವಿವಿಧ ದೇಶಗಳಿಂದ ಹಜ್ಜ್ ಕರ್ಮವನ್ನು ನಿರ್ವಹಿಸಲು ಆಗಮಿಸುವ ಅಲ್ಲಾಹನ ಅತಿಥಿಗಳಾದ ಹಾಜಿಗಳ ಸೇವೆಗೆ ಮಕ್ಕಾ ಹಾಗೂ ಮದೀನಾದಲ್ಲಿ ಆಹೋರಾತ್ರಿ ಸನ್ನದ್ಧರಾದ HVC ಸ್ವಯಂ ಸೇವಕರ ಕಾರ್ಯಾಚರಣೆಯನ್ನು ಉಸ್ತಾದರು ಪ್ರಶಂಶಿಸಿದರು.

ಕಾರ್ಯಕ್ರಮವನ್ನು ಪವಿತ್ರ ಖರ್ಆನ್ ವಾಕ್ಯದಿಂದ ಉದ್ಘಾಟಿಸಿ ಮಾತಾನಾಡಿದ ಉಮ್ಮರ್ ಖಾಮಿಲ್ ಸಖಾಫಿ ಪರಪ್ಪು, ಹಜ್ಜ್ ಸ್ವಯಂ ಸೇವಕರಿಗೆ ಅಲ್ಲಾಹನು ನೀಡುವ ಮಹತ್ವಗಳನ್ನು ವಿವರಿಸಿದರು.
HVC ಕೋಡಿನೇಟರ್ ಇಬ್ರಾಹಿಂ ಕಿನ್ಯ ರವರು ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನೀಫ್ ಸಖಾಫಿ ಬೋಳ್ಮಾರ್ ವಹಿಸಿದರು.ವೇದಿಕೆಯಲ್ಲಿ ಮೂಸಾ ಹಾಜಿ ಕಿನ್ಯ ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆ ಪ್ರ.ಕಾರ್ಯದರ್ಶಿ ಮುಹಮ್ಮದ್ ಕಲಂದರ್ ಶಾಫೀ ಅಸೈಗೋಳಿ ಸ್ವಾಗತಿಸಿ ಮರ್ಹೂಂ ಜಲಾಲುದ್ದೀನ್ ಸವಾದ್ ಪುಲ್ಲು ಸಾಮಣಿಗೆ ರವರ ಜೀವನ ಶೈಯಲಿಯನ್ನು ವಿವರಿಸಿ ಸಂಘಟನಾ ವಿಷಯದಲ್ಲಿ ಸವಾದ್ ನೊಂದಿಗೆ ತನಗಿದ್ದ ಬಾಂಧವ್ಯತೆಯನ್ನು ನೆನದು ಭಾವುಕರಾದರು.
ಕಾರ್ಯಕ್ರಮದಲ್ಲಿ ಮರ್ಹೂಂ ಸವಾದ್ ರವರ ಹೆಸರಿನಲ್ಲಿ ಬೃಹತ್ ತಹ್ಲೀಲ್ ಸಮರ್ಪಣೆ , ಮಯ್ಯತ್ ನಮಾಜ್ ಹಾಗೂ ಅನ್ನದಾನ ಮಾಡಲಾಯಿತು. ಮುಜೀಬ್ ರಹ್ಮಾನ್ ಹರೇಕಳ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ