ಏರ್ ಇಂಡಿಯಾದ ಈ ಎರಡು ಸರ್ವೀಸ್‌ಗಳಲ್ಲಿ ಝಂಝಂ ನೀರಿನ ಸಾಗಾಟಕ್ಕೆ ತಡೆ

ನವದೆಹಲಿ: ಏರ್ ಇಂಡಿಯಾದ ಎರಡು ಸರ್ವೀಸ್‌ಗಳಲ್ಲಿ ಝಂಝಂ ನೀರಿನ ಸಾಗಾಟಕ್ಕೆ ತಡೆ ನೀಡಲಾಗಿದೆ. ಎಐ 966 ಜಿದ್ದಾ/ಹೈದರಾಬಾದ್/ಮುಂಬೈ, ಎಐ964 ಜಿದ್ದಾ/ಕೊಚ್ಚಿನ್ ಮುಂತಾದ ಏರ್ ಇಂಡಿಯಾ ಸರ್ವೀಸ್‌ಗಳಲ್ಲಿ ಈ ನಿಷೇಧ ಏರ್ಪಡಿಸಲಾಗಿದೆ. ಹಜ್ ಯಾತ್ರಿಕರ ಕೊನೆಯ ತಂಡ ಭಾರತಕ್ಕೆ ಮರಳುವ ಸೆಪ್ಟೆಂಬರ್ 15 ರ ವರೆಗೆ ಈ ನಿಷೇಧ ಜಾರಿ ಇರಲಿದೆ. ವಿಸ್ತೃತ ರೂಪದಲ್ಲಿ ಇರುವ ವಿಮಾನದ ಬದಲಾಗಿ ಸಣ್ಣ ಪ್ರಮಾಣದ ವಿಮಾನಗಳು ಈ ಹಾದಿಯಲ್ಲಿ ಹಾರಾಟ ನಡೆಸುತ್ತಿದ್ದು, ಈ ಕಾರಣದಿಂದಾಗಿ ಈ ನಿಷೇಧ ಏರ್ಪಡಿಸಲಾಗಿದೆ ಎಂದು ಏರ್ ಇಂಡಿಯಾ ಸುತ್ತೋಲೆ ಹೊರಡಿಸಿದೆ.

ವಿಸ್ತೃತ ರೂಪದ ವಿಮಾನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಕೇರಳದಿಂದ ಸರ್ವೀಸ್ ನಡೆಸುವ ಇತರ ವಿಮಾನಗಳಿಗೆ ಈ ನಿಷೇಧವಿಲ್ಲ. ಲಗೇಜ್‌ಗಳೊಂದಿಗೆ ಝಂಝಂನ ಕ್ಯಾನ್‌ಗಳನ್ನು ತುಂಬುವುದು ತ್ರಾಸದಾಯಕವೆಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಹಾದಿಯಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನಗಳು ಹಜ್ ಸರ್ವೀಸ್‌ಗಳಿಗಾಗಿ ಹಿಂಪಡೆದ ಕಾರಣಕ್ಕಾಗಿ ಸಣ್ಣ ಗಾತ್ರದ ವಿಮಾನಗಳು ಅಲ್ಲಿಗೆ ಹಾರಾಟ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!