ಸಂಚಾರೀ ನಿಯಮಗಳು ಕಠಿಣ-ಕಾನೂನು ಉಲ್ಲಂಘಿಸುವ ವಿದೇಶೀಯರ ಗಡೀಪಾರು

ಕುವೈತ್ ಸಿಟಿ: ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲುವಾಗಿ ಅಲ್ಲಿನ ಗೃಹ ಸಚಿವಾಲಯ ಕ್ರಮಗಳನ್ನು ಆರಂಭಿಸಿದೆ. ಪರವಾನಗಿ ರಹಿತವಾಗಿ ವಾಹನ ಚಲಾಯಿಸಿದ ವಿದೇಶೀಯರನ್ನು ಶಿಕ್ಷೆಯ ಬಳಿಕ ಗಡಿಪಾರು ಮಾಡಲಾಗುವುದು. ಈ ಕಾರ್ಯದಲ್ಲಿ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಸಚಿವಾಲಯದ ಸಾರ್ವಜನಿಕ ವಿಭಾಗದ ಅಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಂಚಾರ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಿಗಿ ಗೊಳಿಸಲಾಗುವುದು. ದೇಶದಲ್ಲಿ ಸಂಚಾರಿ ಅಪಘಾತ ಮೂಲಕ ಉಂಟಾಗುವ ಮರಣಗಳನ್ನು ತಪ್ಪಿಸುವ ಸಲುವಾಗಿ ಈ ನಡೆ ಎನ್ನಲಾಗಿದೆ. ಅದೇ ವೇಳೆ ಕಾನೂನು ಪಾಲನೆಯಲ್ಲಿ ಚ್ಯುತಿ ಉಂಟುಮಾಡುವ ಅಧಿಕಾರಿಗಳ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತದೆ. ವಾಹನ ಚಲಾಯಿಸುವ ವಿದೇಶೀಯರು ಕಾನೂನು ಪಾಲಿಸಬೇಕು. ಪಾಲಿಸದಿದ್ದಲ್ಲಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಕಾನೂನು ಸಚಿವಾಲಯದ ಪ್ರಸಕ್ತ ಸಾಲಿನ ವರದಿಯ ಅನುಸಾರ ಕಳೆದ ವರ್ಷ 263 ಮಂದಿ ವಾಹನ ಅಪಘಾತ ಮೂಲಕ ಮೃತಪ್ಪಟ್ಟಿದ್ದಾರೆ. ಅಪಘಾತ ಪ್ರಮಾಣವು ಹಿಂದಿನ ವರ್ಷಕ್ಕಿಂತ 2018ರಲ್ಲಿ ಹೆಚ್ಚಾಗಿರುವುದಾಗಿ ವರದಿ ತಿಳಿಸಿದೆ. ಈ ವರದಿಯ ಹಿನ್ನೆಲೆಯಲ್ಲಿ ಯಾತ್ರಿಕರ ಸುರಕ್ಷತೆಗಾಗಿ ರಹದಾರಿ ಕಾನೂನಿನ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನಿಡಲಾಗಿದೆ.

Leave a Reply

Your email address will not be published. Required fields are marked *

error: Content is protected !!