ಈ ಬಾರಿಯೂ ಕಠಿಣ ಉಷ್ಣತೆಯ ನಡುವೆ ಹಜ್- ಎಚ್ಚರಿಕೆ ವಹಿಸುವಂತೆ ಸೂಚನೆ

ಮಕ್ಕಾ: ಮಕ್ಕಾ ಮತ್ತು ಮದೀನಾದಲ್ಲಿ ದಿನದಿಂದ ದಿನಕ್ಕೆ ಉಷ್ಣತೆಯು ಹೆಚ್ಚಾಗುತ್ತಿದೆ. ಈ ವರ್ಷದಲ್ಲೂ ಕಠಿಣ ಉಷ್ಣತೆಯ ನಡುವೆ ಹಜ್ ಕರ್ಮಗಳನ್ನು ನಿರ್ವಹಿಸಬೇಕಾಗುತ್ತದೆ. ಮಿತಿ ಮೀರಿದ ಉಷ್ಣತೆ ಇರುವ ಕಾರಣ ಹಜ್ ಮಿಷನ್ ಹಜ್ಜಾಜ್‌ಗಳಿಗೆ ಎಚ್ಚರಿಕೆ ನೀಡತೊಡಗಿದೆ.

40 ಡಿಗ್ರಿಗಿಂತಲೂ ಹೆಚ್ಚು ಉಷ್ಣತೆ ಮಕ್ಕಾ ಮತ್ತು ಮದೀನಾದಲ್ಲಿ ಸರಾಸರಿ ಇದ್ದು, ಹಜ್‌ನ ವೇಳೆಯಲ್ಲಿ ಇದು ನಲ್ವತ್ತೈದು ಡಿಗ್ರಿ ಸೆಲ್ಸಿಯಸ್ ತಲುಪುವ ಸಂಭವವಿದೆ. ನಿರ್ಜಲೀಕರಣ, ಉದಾಸೀನತೆ ತಡೆಯುವ ಸಲುವಾಗಿ ಹಜ್ ಕಂಪೆನಿಗಳು ಮತ್ತು ಹಜ್ ಮಿಷನ್ ವತಿಯಿಂದ ಛತ್ರಿ ಮತ್ತು ಪಾನೀಯಗಳನ್ನು ಯಥೇಚ್ಛವಾಗಿ ವಿತರಿಸಲಾಗುತ್ತಿದೆ.

ಮಧ್ಯಾಹ್ನ ಸಮಯವನ್ನು ಬಿಟ್ಟು ಸಂದರ್ಶನ ನಡೆಸುವಂತೆ ಹಜ್ಜಾಜ್‌ಗಳಿಗೆ ಸ್ವಯಂ ಸೇವಕರು ಎಚ್ಚರಿಕೆ ನೀಡುತ್ತಿದ್ದಾರೆ. ದಾರಿಯುದ್ದಕ್ಕೂ ತಂಪಾಗಿಸುವ ವಿಧಾನವನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸಲಾಗುವುದು. ಆದರೆ ವೈಯಕ್ತಿಕವಾಗಿಯೂ ತಾಪವನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!