janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್: ದ.ಕ.ಜಿಲ್ಲಾ ಅಧ್ಯಕ್ಷರಾಗಿ ಯೆನೆಪೋಯ ಅಬ್ದುಲ್ಲ ಕುಂಞಿ ಆಯ್ಕೆ

ಸುರತ್ಕಲ್, ಜು.6: ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ ಕೆ.ಎ.ಎಸ್, ಕೆ.ಪಿ.ಎಸ್. ಐ.ಪಿ.ಎಸ್ ಮುಂತಾದ ನಾಗರಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಪತಿಗಳಾದ ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು ಹೇಳಿದರು.

ಅವರು ಕರ್ನಾಟಕ ಮುಸ್ಲಿಂ ಜಮಾಅತ್ ಇದರ ದ.ಕ.ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಮಾತನಾಡುತ್ತಿದ್ದರು. ಉನ್ನತ ಶಿಕ್ಷಣದಲ್ಲಿ ಮುಸ್ಲಿಂ ಸಮುದಾಯವು ಹಿಂದುಳಿದಿದ್ದು ಈ ಬಗ್ಗೆ ಮುಸಿಂ ಸಮುದಾಯದ ಮುಖಂಡರು ಚಿಂತಿಸಿ ಸೂಕ್ತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕೆಂದು ಹೇಳಿದರು.

ಗೌರವಾನ್ವಿತ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ರವರು ದಿಕ್ಸೂಚಿ ಭಾಷಣ ಮಾಡಿ ಮುಸ್ಲಿಂ ಸಮುದಾಯದಲ್ಲೂ ಒಗ್ಗಟ್ಟಿನ ಅವಶ್ಯಕತೆಯನ್ನು ವಿವರಿಸಿದರು. ಸಮಾಜದಲ್ಲೂ ಇತರ ಸಮುದಾಯ ಪರಸ್ಪರ ಪ್ರೀತಿ ವಿಶ್ವಾಸಗಳೊಂದಿಗೆ ಬೆರೆತು ಭಾರತ ದೇಶವನ್ನೂ ಅತ್ಯಂತ ಬಲ ರಾಷ್ಟ್ರವನ್ನಾಗಿ ಮಾಡಬೇಕೆಂದು ಕರೆಯಿತ್ತರು. ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವದ್ಧಿಯ ಪಥದಲ್ಲಿ ಸಮುದಾಯವು ಸಮರ್ಪಕವಾಗಿ ಮನ್ನಡೆಯಲು ಸಮಾಜದ ಮುಖಂಡರು ಮತ್ತು ಧಾರ್ಮಿಕ ಮುಖಂಡರುಗಳ ಸಂಘಟಿತ ಪ್ರಯತ್ನ ಅಗತ್ಯವೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಸಂಯುಕ್ತ ಖಾಝಿಯವರಾದ ಗೌರವಾನಿತ್ವ ಅಸ್ಸಯ್ಯದ್ ಪಝಲ್ ಕೋಯಮ್ಮ ತಂಞಳ್ ಕೂರ ದುವಾ ಮತ್ತು ಆರ್ಶೀವಚನಗೈದರು.

ಕರ್ನಾಟಕ ಮುಸ್ಲಿಂ ಜಮಾಅತ್ ಕಳೆದ 6 ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ರೂಪುಗೊಂಡಿದ್ದು, ಈಗಾಗಲೇ 3 ಜಿಲ್ಲಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಇದರ ಘಟಕವನ್ನು ಪ್ರಾರಂಭಿಸಲಾಗುವು ದೆಂದು ಕರ್ನಾಟಕ ಮುಸ್ಲಿಂ ಜಮಾಅತ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲನಾ ಎನ್.ಕೆ.ಎಮ್ ಶಾಫಿ ಸಅದಿ ಹೇಳಿದರು.

ಕರ್ನಾಟಕ ಮುಸ್ಲಿಂ ಜಮಾಅತ್‌ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಯೆನಪೋಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಅಲ್ಹಾಜ್ ವೈ ಅಬ್ದುಲ್ಲ ಕುಂಞಿ, ಕಾರ್ಯಧ್ಯಕ್ಷರಾಗಿ ಅಲ್ಹಾಜ್ ಎಸ್ ಎಮ್ ರಶೀದ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ ಮಮ್ತಾಝ್ ಅಲಿ, ಕೋಶಾಧಿಕಾರಿಯಾಗಿ ಅಲ್ಹಾಜ್ ಯು.ಕೆ.ಮೋನು ಕಣಚೂರು, ಉಪಾಧ್ಯಕ್ಷರುಗಳಾಗಿ ಸಾಗರ್ ಮುಹಮ್ಮದ್ ಹಾಜಿ, ಅಬೂ ಸುಫಿಯಾನ್ ಮದನಿ, ಎ ಹೈದರ್ ಪರ್ತಿಪಾಡಿ, ಪಿ.ಎಂ. ಅಬ್ದುಲ್ ರಹ್ಮಾನ್ ಅರಿಯಡ್ಕ ಹಾಗೂ ಪ್ರಧಾನ ಸಲಹೆಗಾರರಾಗಿ ಡಾ. ಎಮ್ಮೆಸ್ಸೆಂ ರಶೀದ್ ಝೈನೀ ಕಾಮಿಲ್ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ಪಝಲ್ ಕೋಯಮ್ಮ ತಙಳ್ ಕೂರ, ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಶರಪುಲ್ ಉಲಮಾ ಅಬ್ಬಾಸ್ ಉಸ್ತಾದ್, ಡಾ. ರಝ್ವಿ ಕಾವಲಕಟ್ಟೆ, ಸಚಿವರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಹಾಜಿ ಕುಂಞಿ ಅಹ್ಮದ್ ಎಚ್.ಎಚ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಹಾಜಿ ಮುಹಮ್ಮದ್ ಅರಬಿ ಕುಂಬಳೆ, ಕರ್ನಾಟಕ ಮುಸ್ಲಿಂ ಜಮಾಅತ್‌ನ ಮುಂದಿನ ಕಾರ್ಯಯೋಜನೆಯ ಬಗ್ಗೆ ಹಮೀದ್ ಬಜ್ಪೆಯವರು ವಿವರಿಸಿದರು.

ಹಾಜಿ ಬಿ.ಎಂ ಮಮ್ತಾಝ್ ಅಲಿ ಸ್ವಾಗತಿಸಿ, ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ವಂದಿಸಿದರು. ಎ.ಕೆ.ನಂದಾವರ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com