janadhvani

Kannada Online News Paper

ದುಬೈ: ಹಜ್‌ನ ಪ್ರಮುಖ ಆರಾಧನಾ ದಿನಗಳಾದ ದುಲ್ ಹಜ್ ತಿಂಗಳ 9, 10, 11, 12ನೇ ದಿನಗಳಲ್ಲಿ ರಜೆ ಸಾರಿರುವುದಾಗಿ ಯುಎಇ ಫೆಡರಲ್ ಅಥಾರಿಟಿ ಫಾರ್ ಗವರ್ನಮೆಂಟ್ ಹ್ಯೂಮನ್ ರಿಸರ್ಸ್ (ಎಫ್ಎಎಚ್ಆರ್) ತಿಳಿಸಿದೆ. ಅದೇ ವೇಳೆ ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲೂ ನಾಲ್ಕು ದಿನಗಳ ರಜೆ ಸಾರಿರುವುದಾಗಿಯೂ ಅಥಾರಿಟಿ ವ್ಯಕ್ತಪಡಿಸಿದೆ.

ಈ ವರ್ಷ ಆರಂಭದಲ್ಲಿ ಯುಎಇ ಕ್ಯಾಬಿನೆಟ್ ಕೈಗೊಂಡ ತೀರ್ಮಾನದಂತೆ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ರಜಾ ದಿನಗಳನ್ನು ಏಕೀಕರಿಸಲಾಗಿದೆ. ಆ ಪ್ರಕಾರ ಖಾಸಗಿ ವಲಯಕ್ಕೂ ನಾಲ್ಕು ದಿನಗಳ ರಜೆ ಘೋಷಿಸಲಾಗಿ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಹನ್ನೆರಡನೇ ತಿಂಗಳಾದ ದುಲ್‌ಹಜ್ ‌ನ ಒಂಬತ್ತನೇ ದಿನದಂದು ಅರಫಾ ದಿನವಾಗಿದೆ.

ದುಲ್‌ಹಜ್ 10 ರಂದು ವಿಶ್ವದಾದ್ಯಂತ ಮುಸಲ್ಮಾನರು ಈದುಲ್ ಅಝ್ಹಾ ಆಚರಿಸುತ್ತಾರೆ.ದುಲ್ಖಅದ್ 29 ರಂದು ಚಂದ್ರ ದರ್ಶನವಾಗಿರುವ ಬಗ್ಗೆ ವಿಶ್ವಸನೀಯ ಮಾಹಿತಿ ಲಭ್ಯವಾದರೆ ಮಾರನೇ ದಿನ ಒಂದಾಗಿ ಪರಿಗಣಿಸಲಾಗುತ್ತದೆ. ಆಗಸ್ಟ್ ಒಂದರಂದು ಸಾಯಂಕಾಲ ಚಂದ್ರ ದರ್ಶನ ಕಂಡುಬಂದಲ್ಲಿ ತಿಳಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ ಒಂದರ ಸಾಯಂಕಾಲ ಚಂದ್ರದರ್ಶನವಾದರೆ ಆಗಸ್ಟ್ ಎರಡರಂದು ದುಲ್‌ಹಜ್ ಒಂದಾಗಿ ಪರಿಗಣಿಸಲಾಗುತ್ತದೆ.

error: Content is protected !! Not allowed copy content from janadhvani.com