janadhvani

Kannada Online News Paper

ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿಗಳು ಯುಎಇಗೆ ಆಗಮಿಸಲು ಸುಲಭ ವಿಸಾ

ದುಬೈ: ಇತರ ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿಗಳು ಯುಎಇಗೆ ಆಗಮಿಸಲು ಅನುವಾಗುವಂತೆ ದುಬೈ ಸರಕಾರವು ವಿಸಾ ಕ್ರಮವನ್ನು ಸಡಿಲಗೊಳಿಸಿದೆ. ವಿದೇಶಿಗರು ದುಬೈ ಅನಿವಾಸಿ ಇಲಾಖೆ ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ನೇರವಾಗಿ ವೀಸಾಗೆ ಅರ್ಜಿ ಸಲ್ಲಿಸಬಹುದು.

ಜಿ.ಡಿ.ಎಫ್.ಆರ್.ಎ ವೆಬ್ಸೈಟ್ ಹೊರತಾಗಿ, ಜಿ.ಡಿ.ಆರ್‌ಎಫ್.ಎ. ಮೊಬೈಲ್ ಅಪ್ಲಿಕೇಶನ್ ಮೂಲಕ ಇತರ ಗಲ್ಫ್ ದೇಶಗಳಲ್ಲಿನ ಅನಿವಾಸಿಗಳು ವೀಸಾಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ದಾಖಲೆ ಸರಿಯಾಗಿದ್ದರೆ, ವೀಸಾ ಇಮೇಲ್ ಮೂಲಕ ಅರ್ಜಿದಾರರಿಗೆ ಲಭ್ಯವಾಗಲಿದೆ ಎಂದು ವಲಸೆ ಇಲಾಖೆಯ ಸಹಾಯಕ ನಿರ್ದೇಶಕ ಕರ್ನಲ್ ಉಮರ್ ಅಲಿ ಅಲ್ ಶಂಸಿ ಹೇಳಿದರು.

ಅಭ್ಯರ್ಥಿಗಳ ನಿವಾಸಿ ವೀಸಾ ಅವಧಿ ಮೀರಿರಬಾರದು ಮತ್ತು ಪಾಸ್‌ಪೋರ್ಟ್ ಆರು ತಿಂಗಳ ವಾಯಿದೆ ಇರಬೇಕು. ಉದ್ಯೋಗ ಮತ್ತು ಹುದ್ದೆಯು ವಿಸಾ ಪಡೆಯುವ ಮಾನದಂಡಗಳಿಗೆ ಅನ್ವಯವಾಗುತ್ತವೆ. ಮೊದಲ 30 ದಿನ ಪ್ರವೇಶ ಪರವಾನಗಿಯನ್ನು ಅನುಮತಿಸಲಾಗುತ್ತದೆ. ವೀಸಾ ಪಡೆಯುವ ಸಮಯದಲ್ಲಿ ಹಣ ಪಾವತಿಸಿ ಮತ್ತೆ 30 ದಿನಗಳವರೆಗೆ ವೀಸಾವನ್ನು ವಿಸ್ತರಿಸಬಹುದು.

ಇಂತಹ ವಿಸಾದಲ್ಲಿ ಯುಎಇ ತಲುಪುವವರು ಕಾಲಾವಕಾಶ ಮುಗಿದ ನಂತರ ಉಳಿದುಕೊಂಡರೆ ಮೊದಲ ದಿನ 200 ದಿರ್ಹಂ ದಂಡ ಪಾವತಿಸಬೇಕಾಗುತ್ತದೆ. ನಂತರ ಪ್ರತೀ ದಿನಕ್ಕೆ 100 ದಿರ್ಹಂಗಳಂತೆ ದಂಡ ಪಾವತಿಸಬೇಕಾಗುತ್ತದೆ.

error: Content is protected !! Not allowed copy content from janadhvani.com