janadhvani

Kannada Online News Paper

ವಿಮಾನದಲ್ಲಿ ಬೆಂಕಿ: ಇದೊಂದು ಸಣ್ಣ ಮಟ್ಟದ ಪ್ರಕರಣ-ಏರ್‌ ಇಂಡಿಯಾ

ನವದೆಹಲಿ: ದೆಹಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನದ (ಬೋಯಿಂಗ್‌777) ಆಕ್ಸಿಲರಿ ಪವರ್‌ ಯುನಿಟ್‌ನಲ್ಲಿ ಬುಧವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಘಟಣೆ ನಡೆದಿದ್ದು, ಪ್ರಯಾಣಿಕರು ಇಲ್ಲದ ಸಮಯದಲ್ಲಿ ಎಸಿ ರಿಪೇರಿ ಕಾರ್ಯ ನಡೆಸುವಾಗ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಬೆಂಕಿ ನಂದಿಸಲಾಗಿದೆ.ಈ ಸಂಬಂಧ ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ ‘ಇದೊಂದು ಸಣ್ಣ ಪ್ರಮಾಣದ ಪ್ರಕರಣ’ ಎಂದಿದೆ.

#WATCH Air India Delhi to San Francisco (Boeing 777) flight caught fire in Auxiliary Power Unit (APU) yesterday at Delhi airport. Fire started during AC repair. Air India terms it minor incident, plane was empty at the time of repair work, fire was doused immediately. pic.twitter.com/Og790FVABE— ANI (@ANI) April 25, 2019

ಸದ್ಯ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ಅದೃಷ್ಟವಶಾತ್​​ ಯಾವುದೇ ಅನಾಹುತ ನಡೆದಿಲ್ಲ. ನಾವು ಫ್ಲೈಟ್​​ನಲ್ಲಿ ಎಸಿ ದುರಸ್ತಿ ಕಾರ್ಯ ಮಾಡುತ್ತಿದ್ದೆವು. ಆಗ ಈ ರೀತಿ ಬೆಂಕಿ ಕಾಣಿಸಿಕೊಡಿದೆ. ತಕ್ಷಣವೇ ಎಚ್ಚೆತ್ತು ಬೆಂಕಿಯನ್ನು ನಂದಿಸಿದ್ದೇವೆ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ತಿಳಿಸಿದ್ಧಾರೆ.

ವಿಮಾನದಲ್ಲಿ ಯಾಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ದುರ್ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ​​

error: Content is protected !! Not allowed copy content from janadhvani.com