janadhvani

Kannada Online News Paper

ಹಾವೇರಿ ಮುಈನುಸ್ಸುನ್ನಾ ಮಸೀದಿ ನಾಳೆ ಸಯ್ಯಿದ್ ಹಬೀಬ್ ಆದಿಲ್ ಅಲ್ ಜಿಫ್ರೀಯವರಿಂದ ಲೋಕಾರ್ಪಣೆ

ಹಾವೇರಿ:ಉತ್ತರ ಕರ್ನಾಟಕದ ಶೈಕ್ಷಣಿಕ ಪ್ರಗತಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹಾವೇರಿಯ ಮುಈನುಸ್ಸುನ್ನಾ ಸಂಸ್ಥೆ ನಿರ್ಮಿಸಿದಂತಹ ಮುಈನುಸ್ಸುನ್ನಾ ಆಯಿಶಾ ಹನಫೀ ಮಸೀದಿ ಇದರ ಉಧ್ಘಾಟನಾ ಸಮಾರಂಭವು ಆದಿತ್ಯವಾರ ನಾಳೆ ಒಂದು ಗಂಟೆಗೆ ನಡೆಯಲಿದೆ.

ಅಂತರಾಷ್ಟ್ರೀಯ ಜಗತ್ ಪ್ರಸಿದ್ದ ವಿಧ್ವಾಂಸ ಮುಸ್ಲಿಂ ಸ್ಕಾಲರ್ ಪ್ರಭಾವಿ ಭಾಷಣಗಾರ ಸಯ್ಯಿದ್ ಉಮರ್ ಆದಿಲ್ ಅಲ್ ಜಿಫ್ರೀ ಮದೀನ ಮುನವ್ವರ, ಹಲವಾರು ಜಾಗತಿಕ ಪ್ರಶಸ್ತಿಗಳಿಗೆ ಕಾರಣೀಕರ್ತರಾದ ಶ್ರೇಷ್ಠ ಆಲಿಂ,ಮೂಲತ ಯಮನಿನವರಾದ ಇವರು ಮಅದಿನ್ ಮರ್ಕಝ್ ನಂತಹ ವಿಶ್ವವಿಖ್ಯಾತ ವಿಧ್ಯಾಸಂಸ್ಥೆಗಳಿಗೆ ಬೇಟಿ ಕೊಟಿದ್ದಾರೆ. ಅವರು ನಾಳೆ ಮಈನುಸ್ಸುನ್ನಾ ಮಸೀದಿಯ ಉಧ್ಘಾಟನೆ ಮಾಡಲಿರುವರು.

ಸಮಸ್ಥೆಯ ಅಧ್ಯಕ್ಷ ಸಯ್ಯದ್ ಅಬ್ದುರ್ರಹ್ಮಾನ್ ಸಹೀರ್ ಅಲ್ ಬುಖಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಹುಮನ್ಯರಾದ ಸಯ್ಯಿದ್ ಉಮರ್ ಆದಿಲ್ ಅಲ್ ಜಿಫ್ರೀಯವರು ಉಧ್ಘಾಟಿಸಿ ಮಾತನಾಡಲಿದ್ದಾರೆ, ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆಎ ಮುಸ್ತಫ ನಈಮಿ ಪ್ರಕಟೆನೆಯಲ್ಲಿ ತಿಳಿಸಿದರು.

error: Content is protected !! Not allowed copy content from janadhvani.com