janadhvani

Kannada Online News Paper

ಮೋದಿಯಿಂದ ಮಂಗಳೂರಿಗೆ ಶೂನ್ಯ ಸಾಧನೆ- ಎಚ್.ಡಿ. ಕುಮಾರಸ್ವಾಮಿ

ಮಂಗಳೂರು, ಏ.7- ಲಾಭದಲ್ಲಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಲಾಣವನ್ನು ಖಾಸಗಿಯವರಿಗೆ ವಹಿಸಿರುವುದು, ವಿಜಯಾ ಬ್ಯಾಂಕನ್ನು ಗುಜರಾತ್‌ನ ಬ್ಯಾಂಕ್ ಆಫ್ ಬರೋಡಕ್ಕೆ ವಿಲೀನಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ವ್ಯಂಗ್ಯವಾಡಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ? ಮಂಗಳೂರಿನ ಅಭಿವೃದ್ಧಿಗಾಗಿ ಅನುಧಾನ ನೀಡಿಲ್ಲ . ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಸಂಸ್ಥೆಗಳನ್ನು ಒಂದೊಂದಾಗಿ ಮುಚ್ಚಿಕೊಂಡು ಬಂದಿದ್ದಾರೆ. ಇಂತವರಿಗೆ ಮತ ಹಾಕಬೇಕೇ ಎಂದು ಪ್ರಶ್ನಿಸಿದರು.

ದಕ್ಷಿಣ ಕನ್ನಡ ಲೋಕಸಭ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರವಾಗಿ ಪ್ರಚಾರ ನಡೆಸಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ನಳಿನ್ ಕುಮಾರ್ ಕಟೀಲು ಮುಖ ನೋಡಿ ಮತ ಹಾಕಬೇಡಿ ಮೋದಿ ಮುಖ ನೋಡಿ ಮತ ಹಾಕಿ ಎಂದು ಬಿಜೆಪಿ ಯವರು ಹೇಳುತ್ತಿದ್ದಾರೆ. ಮೋದಿ ಏನು ಸಾಧನೆ ಮಾಡಿದ್ದಾರೆ ಎಂದು ಮತ ಹಾಕಬೇಕಾ ಇದು ಮಂಗಳೂರಿನ ಜನರ ಸ್ವಾಭಿಮಾನದ ಪ್ರಶ್ನೆ ಎಂದರು.

ಇಲ್ಲಿನ ವಿಮಾನ ನಿಲ್ದಾಣ, ವಿಜಯಾ ಬ್ಯಾಂಕ್ ಇವೆರಡೂ ನಷ್ಟದಲ್ಲಿ ಇಲ್ಲದಿದ್ದರೂ ಮೋದಿಯವರು ಮಂಗಳೂರಿನ ಜನರ ಸ್ವಾಭಿಮಾನಕ್ಕೆ ದಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 13 ರಂದು ರಾಹುಲ್ ಗಾಂಧಿ ಕಾರ್ಯಕ್ರಮವಿದೆ. ಅದೇ ದಿನ ನರೇಂದ್ರ ಮೋದಿಯವರು ಈ ಜಿಲ್ಲೆಗೆ ಬರುವ ಉದ್ದೇಶವಾದರೂ ಏನು ? ಯಾವ ಮುಖ ಹೊತ್ತು ಬರುತ್ತಾರೆ ಎಂದು ಆರೋಪಿಸಿದರು.

error: Content is protected !! Not allowed copy content from janadhvani.com