janadhvani

Kannada Online News Paper

ಜಾತಿ ನೋಡಿ ಮತ ಹಾಕಿದರೆ ಮೈತ್ರಿ ಸರ್ಕಾರ ಉಳಿಯುವುದಿಲ್ಲ- ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ: ‘ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಒಕ್ಕಲಿಗರು ಎನ್ನುವ ಕಾರಣಕ್ಕೆ ಒಕ್ಕಲಿಗರು ಅವರಿಗೆ ಮತ ನೀಡಿದರೆ ಒಕ್ಕಲಿಗ ಜನಾಂಗದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರಕ್ಕೆ ಕುತ್ತು ಬರಲಿದೆ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮೈತ್ರಿ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಜಾತಿ ನೋಡಿ ಮತ ಹಾಕಿದರೆ ಮೈತ್ರಿ ಸರ್ಕಾರ ಉಳಿಯುವುದಿಲ್ಲ’ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಮೊಯಿಲಿ ಅವರಿಗೆ ಸಚಿವರಾದ ಎನ್.ಎಚ್.ಶಿವಶಂಕರರೆಡ್ಡಿ, ಎಂ.ಟಿ.ಬಿ ನಾಗರಾಜ್, ಶಾಸಕರಾದ ಡಾ.ಕೆ.ಸುಧಾಕರ್, ನಿಸರ್ಗ ನಾರಾಯಣಸ್ವಾಮಿ, ವೆಂಕಟರಮಣಯ್ಯ, ಎಸ್.ಎನ್.ಸುಬ್ಬಾರೆಡ್ಡಿ ಸಾಥ್ ನೀಡಿದರು.

error: Content is protected !! Not allowed copy content from janadhvani.com