ಸರ್ವಾಧಿಕಾರಿ ನಿಯಂತ್ರಣಕ್ಕೆ ಯಾವುದೇ ರೀತಿಯ ಅವಕಾಶವಿಲ್ಲ- ಮನಮೋಹನ್ ಸಿಂಗ್

ನವದೆಹಲಿ:ಭಾರತದಲ್ಲಿ ಸರ್ವಾಧಿಕಾರಿ ನಿಯಂತ್ರಣಕ್ಕೆ ಯಾವುದೇ ಅವಕಾಶವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟರು.

ಶುಕ್ರವಾರದಂದು ದಿ ಹಿಂದೂ ಚೇಂಜ್ ಮೇಕರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮನಮೋಹನ್ ಸಿಂಗ್ “ಸಾರ್ವಜನಿಕ ನೀತಿಗಳಲ್ಲಿ ಯಾವುದೇ ಸಂಶೋಧನೆಗಳು ಒಪ್ಪಿಗತವಾದಲ್ಲಿ ಮಾತ್ರ ಯಶಸ್ಸನ್ನು ಸಾಧಿಸಬಲ್ಲವು, ಭಾರತವು ಪ್ರಜಾತಾಂತ್ರಿಕ ಮಾರ್ಗವನ್ನು ಆಯ್ದುಕೊಂಡಿದೆ.ಆದ್ದರಿಂದ ಇಲ್ಲಿ ಯಾವುದೇ ರೀತಿ ಸರ್ವಾಧಿಕಾರಿ ನಿಯಂತ್ರಣಕ್ಕೆ ಯಾವುದೇ ರೀತಿಯ ಅವಕಾಶವಿಲ್ಲ ಎಂದು   ಹೇಳಿದರು.

ರಾಜಕೀಯ ನಾಯಕತ್ವದ ಬಗ್ಗೆ ಪ್ರಸ್ತಾಪಿಸಿ ಸಮಾಜದಲ್ಲಿನ ವಂಚಿತ ಸಮುದಾಯದ ಬದಲಾವಣೆಗಾಗಿನ ಜವಾಬ್ದಾರಿ ಬಗ್ಗೆ ಪ್ರಾಮುಖ್ಯತೆ ನೀಡಬೇಕೆಂದರು.ಅಲ್ಲದೆ ರಾಜಕೀಯ ಮುತ್ಸದ್ದಿ ಪ್ರಮುಖ ಕರ್ತವ್ಯ ಎಲ್ಲ ನಾಗರಿಕರನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಪರಿವರ್ತನೆ ಬಗ್ಗೆ ತಿಳಿ ಹೇಳಬೇಕು ಎಂದರು.

1991 ರಲ್ಲಿ ತಮ್ಮ ಸರ್ಕಾರ ಹಲವು ಸಂಗತಿ ಗಳನ್ನು ಬದಲಾವಣೆ ಮಾಡಿತು, ಅದಕ್ಕೆ ಪ್ರಮುಖ ಕಾರಣ ಭಾರತದಲ್ಲಿ ಕೆಲವರು ನಮ್ಮ ಬಗ್ಗೆ ಇಟ್ಟಿದ್ದ ನಂಬಿಕೆ ಮತ್ತು ಹಳೆಯ ಮಾದರಿಯ ರಾಷ್ಟ್ರೀಯತೆ ಎಂದರು.ಆರ್ಥಿಕ ಸುಧಾರಣೆಗಳು ಬದಲಾವಣೆ ಪ್ರಕ್ರಿಯೆಯನ್ನು ಪರಿವರ್ತಿಸಿತು. ಅದೇ ಪ್ರಕ್ರಿಯೆಗಳನ್ನು ನಂತರ ಬಂದಂತಹ ಸರ್ಕಾರಗಳು ಕೂಡ ಜಾರಿಗೆ ತಂದವು ಎಂದು ಸಿಂಗ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!