janadhvani

Kannada Online News Paper

ಸೌದಿ: ವಾಹನಗಳ ಮಧ್ಯೆ ಅಂತರವನ್ನು ಕಾಯ್ದುಕೊಳ್ಳದಿದ್ದಲ್ಲಿ ದಂಡ

ರಿಯಾದ್: ಸೌದಿ ಅರೇಬಿಯಾದಲ್ಲಿ ವಾಹನ ಚಲಾಯಿಸುವವರು ಮುಂದಿನ ವಾಹನದಿಂದ ನಿರ್ದಿಷ್ಟ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಂಚಾರಿ ಡೈರೆಕ್ಟರೇಟ್ ಹೇಳಿದೆ. ಅಂತರವನ್ನು ಇಟ್ಟುಕೊಳ್ಳದೆ ವಾಹನ ಚಲಾಯಿಸುವುದು ಕಾನೂನು ಉಲ್ಲಂಘನೆಯಾಗಿದ್ದು, ಅಪಾಯವನ್ನು ಆಹ್ವಾನಿಸಲಿದೆ ಎಂದು ಅದು ಎಚ್ಚರಿಸಿದೆ.

ಅಂತರವನ್ನು ಕಾಯ್ದಿರಿಸಿಕೊಳ್ಳದೆ ವಾಹನ ಚಲಾಯಿಸುವುದು ಟ್ರಾಫಿಕ್ ಕಾನೂನು ಉಲ್ಲಂಘನೆಯಾಗಿರುವ ಕಾರಣ ಚಾಲಕರಿಗೆ ದಂಡ ವಿಧಿಸಲಾಗುವುದು ಎಂದು ಸಂಚಾರಿ ಇಲಾಖೆ ಎಚ್ಚರಿಸಿದೆ.

ಸೌದಿಯಲ್ಲಿನ ರಸ್ತೆ ಸಂಚಾರ ಕಾನೂನು ಪರಿಷ್ಕರಿಸಿದ್ದು ಪರಿಣಾಮಕಾರಿಯಾಗಿದೆ. ಹೆಚ್ಚುವರಿ ಕಣ್ಗಾವಲು ಕ್ಯಾಮೆರಾಗಳನ್ನು ಸ್ಥಾಪಿಸಿ ಪೆನಾಲ್ಟಿಯನ್ನೂ ಹೆಚ್ಚಿಸಿದೆ. ಇದರ ಜೊತೆಗೆ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರಸ್ತೆ ಅಪಘಾತಗಳನ್ನು ಗಣನೀಯವಾಗಿ ತಗ್ಗಿಸಲು ಇದು ಸಹಾಯ ಮಾಡಿದೆ ಎಂದು ಸಾರಿಗೆ ಇಲಾಖೆ ತಿಳಿಸಿದ್ದು,ಈ ವರ್ಷ ನವೆಂಬರ್ನಲ್ಲಿ ಪರಿಷ್ಕೃತ ಟ್ರಾಫಿಕ್ ಕಾನೂನು ಉಲ್ಲಂಘನೆಗಳಿಗೆ ದಂಡ ಜಾರಿಗೆ ಬಂದಿತ್ತು. ದಂಡವನ್ನು 100 ರಿಂದ 10,000 ರಿಯಾಲ್ ವರೆಗೆ ಏಳು ವಿಭಾಗಗಳಾಗಿ ವಿಂಗಡಿಸಿ, ಪರಿಷ್ಕರಿಸಲಾಗಿದೆ.

error: Content is protected !! Not allowed copy content from janadhvani.com