ರಿಯಾದ್: ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ (ರಿ) ಮೂಡುಬಿದ್ರಿ ಇದರ ರಿಯಾದ್ ಸಮಿತಿ ಸಭೆಯು ನಝೀರ್ ಕಾಶಿಪಟ್ಣರವರ ನಿವಾಸದಲ್ಲಿ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಅಬ್ದುಲ್ ಹಮೀದ್ ಹೊಸಂಗಡಿಯವರ ಅಧ್ಯಕ್ಷತೆಯಲ್ಲಿ 06/01/2019 ಆದಿತ್ಯವಾರ ರಾತ್ರಿ ಸಂಸ್ಥೆಯ ಸಾರಥಿ ಪಿ.ಪಿ. ಅಹ್ಮದ್ ಸಖಾಫಿಯವರ ಗಣ್ಯ ಉಪಸ್ಥಿತಿಯಲ್ಲಿ ನಡೆಯಿತು.
ರಿಯಾದ್ ನೂತನ ಸಮಿತಿಯ ಗೌರವಾಧ್ಯಕ್ಷರುಗಳಾಗಿ ನಝೀರ್ ಕಾಶಿಪಟ್ಣ ಹಾಗೂ ಕರೀಮ್ ಲತೀಫಿ ಆಯ್ಕೆಯಾದರು. ಅಧ್ಯಕ್ಷರಾಗಿ ಸಂಘ ಸಂಸ್ಥೆಗಳ ಸಕ್ರಿಯ ನಾಯಕ ಹಂಝ ಮೈಂದಾಳ ಹಾಗೂ ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಗಂಟಲ್ಕಟ್ಟೆರವರು ಸರ್ವಾನುಮತದಿಂದ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಗಳಾಗಿ ಇಕ್ಬಾಲ್ ನೀರಳಿಕೆ, ಜೊತೆ ಕಾರ್ಯದರ್ಶಿ ಅಲ್ತಾಫ್ ನೀರಳಿಕೆ, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಸಾಲೆತ್ತೂರು ರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ಸಿತಾರ್, ಹಬೀಬ್ ಟಿ.ಎಚ್., ಅಶ್ರಫ್ ಕಿಲ್ಲೂರು, ಹಸನ್ ಸಾಗರ್, ನಿಝಾಮ್ ಸಾಗರ್, ಇಸ್ಮಾಯಿಲ್ ಕನ್ನಂಗಾರ್, ತಕ್ವೀದ್ ನೀರಳಿಕೆ, ಮುನೀರ್ ಬಜಾಲ್, ಶರೀಫ್ ಕೊಲ್ಪೆ, ಶಾಫಿ ಹೊಸಂಗಡಿ, ರಹೀಮ್ ಮಂಗಳೂರು ಟೂರ್ಸ್ ರವರನ್ನು ಆರಿಸಲಾಯಿತು.
ನಂತರ ಮಫಾಝ್ ರಿಯಾದ್ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಹೊಸಂಗಡಿ, ನೂತನ ಅಧ್ಯಕ್ಷ ಹಂಝ ಮೈಂದಾಳ ಹಾಗೂ ಹಿರಿಯ ವಿದ್ವಾಂಸ ಪಿ.ಪಿ. ಅಹ್ಮದ್ ಸಖಾಫಿಯವರು ನೂತನ ಸಮಿತಿಗೆ ಶುಭಾಶಯ ಕೋರಿದರು.
ಕೊನೆಯಲ್ಲಿ ಅಶ್ರಫ್ ಕಿಲ್ಲೂರು ರವರ ಧನ್ಯವಾದ ಹಾಗೂ 3 ಸ್ವಲಾತಿನೊಂದಿಗೆ ಸಭೆ ಕೊನೆಗೊಳಿಸಲಾಯಿತು















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ