janadhvani

Kannada Online News Paper

ಚಾನಲ್ ನಿರೂಪಕನಿಂದ ಪ್ರವಾದಿ ನಿಂದನೆ-ಪ್ರಕರಣ ದಾಖಲಿಸುವಂತೆ ಮುಸ್ಲಿಂ ಒಕ್ಕೂಟ ಆಗ್ರಹ

ಮಂಗಳೂರು,ಡಿ.28: ಇತ್ತೀಚೆಗೆ ಸುವರ್ಣ ನ್ಯೂಸ್ ಚಾನಲ್ ನ ನಿರೂಪಕರಾದ ಅಜಿತ್ ರವರು ಪ್ರೊಫಸರ್ ಭಾಗವಾನ್ ರವರು ಈ ಹಿಂದೆ ಒಂದು ಸಮುದಾಯದ ಆದರ್ಶ ಪುರಿಷರ ಬಗ್ಗೆ ಅವಹೇಳನಕಾರಿಯಾಗಿ ಪ್ರಸ್ತಾಪಿಸಿದನ್ನು ಟಿವಿ ಯಲ್ಲಿ ವಿಶ್ಲೇಷಿಸುವ ಸಂದರ್ಭದಲ್ಲಿ ಇಸ್ಲಾಮಿನ ಪ್ರವಾದಿ ಯವರ ಬಗ್ಗೆ ನಿಂದನಾತ್ಮಕ ವಾಗಿ ಪ್ರಸ್ತಾಪಿಸಿರುವುದನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.

ಪ್ರೊ ಫಸರ್ ಭಗವಾನ್ ರವರ ಹೇಳಿಕೆಯನ್ನು ವಿಶ್ಲೇಷಿಸುವ ಭರದಲ್ಲಿ ನಿರೂಪಕ ಅಜಿತ್ ರವರು ಮುಸ್ಲಿಂ ಸಮುದಾಯದವರೊಂದಿಗೆ ಸರ್ವ ಧರ್ಮದವರು ಗೌರವಿಸುವ ಪ್ರವಾದಿ ಮುಹಮ್ಮದ್ ರ ವರ ಜೀವನ ಕ್ರಮದ ಅಸಹನೆಯ ಸಿದ್ದಾಂತ ಭಯೋತ್ಪಾದಕ ಟಿಪ್ಪು ಹುಟ್ಟಿಕೊಳ್ಳಲು ಕಾರಣ ಎಂಬಿತ್ಯಾದಿಯಾಗಿ ಪ್ರವಾದಿಯವರನ್ನು ನಿಂದನೆ ಗೊಳಿಸಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಈ ಬಗ್ಗೆ ಪೋಲೀಸ್ ಇಲಾಖೆ ನಿರೂಪಕ ಅಜಿತ್ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಅಪೇಕ್ಷಿಸುತ್ತದೆ.

ಕೆ.ಅಶ್ರಫ್ (ಮಾಜಿ ಮೇಯರ್ )
ಅಧ್ಯಕ್ಷರು
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ,ಮಂಗಳೂರು