janadhvani

Kannada Online News Paper

ಸೆಪ್ಟಂಬರ್ 16:ಎಸ್ಸೆಸ್ಸೆಫ್ ಟೀಮ್ ಹಸನೈನ್ ಟ್ರೈನಿಂಗ್ ಕ್ಯಾಂಪ್ ಖಿಯಾದ-2018

ಮಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಟೀಮ್ ಹಸನೈನ್ ಟ್ರೈನಿಂಗ್ ಕ್ಯಾಂಪ್ ಖಿಯಾದ-2018 ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ರವರ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ 16 ಆದಿತ್ಯವಾರ ಮಧ್ಯಾಹ್ನ 11:00 ಗಂಟೆಗೆ ಮಸ್ಜಿದ್ ಖುಬಾ ಶರೀಫ್ ಕಾಲೊನಿ ಹಾಸನದಲ್ಲಿ ನಡೆಯಲಿರುವುದು.
ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ತರಗತಿಯನ್ನು ನಡೆಸಲಿದ್ದಾರೆ ಎಂದು ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.