ದುಬೈ: ಶಾರ್ಜಾ-ದುಬೈ ಸಾರಿಗೆಯನ್ನು ಸುಲಭಗೊಳಿಸಲು ಹೊಸ ಸೇತುವೆಯನ್ನು ತೆರೆಯಲಾಗಿದೆ.ರಜೆ ಮುಗಿದು ಒಂದು ದಶಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಮರಳಿದ ಮೊದಲ ದಿನ, ದೇಶದ ಅನೇಕ ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತೆ ಅನುಭವಿಸಿತು.ಈ ಕಾರಣಕ್ಕಾಗಿ ಎಮಿರೇಟ್ಸ್ ರೋಡ್ ಮತ್ತು ಶಾರ್ಜಾ-ಮಲೀಹ ರಸ್ತೆಯನ್ನು ಸಂಚಾರಕ್ಕೆ ಸಂಪರ್ಕಿಸುವ ಅಲ್ ಬಾದೀ ಇಂಟರ್ಚೇಂಜ್ ಅನ್ನು ಸಂಚಾರಕ್ಕಾಗಿ ತೆರೆಯಲಾಯಿತು.
ಎರಡು ಇಮಾರಾತ್‌ಗಳನ್ನು ಬಂಧಿಸುವ ಇಂಟರ್ ಚೇಂಜ್‌ನ ನಿರ್ಮಾಣವು ವರ್ಷದ ಕೊನೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವಾಲಯ ಹೇಳಿದೆ. ಈ ಮೂಲಕ ಗಂಟೆಗೆ 17,700 ಕಾರುಗಳು ಪ್ರಯಾಣಿಸಲು ಸಾಧ್ಯವಾಗಲಿದೆ.ಸೇತುವೆಯ ಅಧಿಕೃತ ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ.ಅಬ್ದುಲ್ಲಾ ಅಲ್-ನುಐಮಿ ಹೇಳಿದರು.
ಎರಡು ಕಿಲೋಮೀಟರ್ಗಳ ಮೂರು ಲೈನ್‌ಗಳ ರಸ್ತೆಯನ್ನೂ ಯೋಜನೆ ಹೊಂದಿದೆ. ಟ್ರಕ್ಕುಗಳಿಂದ ಉಂಟಾಗುವ ಸಂಚಾರ ದಟ್ಟಣೆ ತಪ್ಪಿಸಲು ಹೊಸ ಯೋಜನೆಯು ನೆರವಾಗಲಿದೆ.ಯೋಜನೆಯ ವೆಚ್ಚ ಸುಮಾರು 20 ಕೋಟಿ ದಿರ್ಹಂ ಎನ್ನಲಾಗಿದೆ. ಯೋಜನೆಯು ಮುಗಿದ ನಂತರ ಶಾರ್ಜಾ-ದುಬೈ ಪ್ರಯಾಣದ ಸಮಯ ಕೂಡ ಕಡಿಮೆಯಾಗಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು