ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನದ ಯು.ಎ.ಇ ರಾಷ್ಟ್ರೀಯ ಸಮಿತಿ ವತಿಯಿಂದ, ಈ ವರ್ಷ ಪವಿತ್ರ ಹಜ್ ಕರ್ಮಕ್ಕೆ ತೆರಳಲಿರುವ ಸಂಸ್ಥೆಯ ಪ್ರಮುಖ ನಾಯಕರುಗಳಿಗೆ ಸಾಲು ಹೊದಿಸಿ ಗೌರವಿಸುವ ಮೂಲಕ ಭಾವುಕ ಹಾಗೂ ಅದ್ದೂರಿ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲಿರುವ ಡಿಕೆಯಸ್ಸಿ ದೇರಾ ಯುನಿಟ್ ಅಧ್ಯಕ್ಷರಾದ ಸಿದ್ದೀಖ್ ಉಳ್ಳಾಲ ಹಾಗೂ ದೇರಾ ಯುನಿಟ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಶುಕೂರ್ ಮಣಿಲ ಅವರಿಗೆ ಸಮಿತಿಯ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅತ್ಯಂತ ಭಾವುಕವಾಗಿ ಸನ್ಮಾನಿಸಲಾಯಿತು. ಹಜ್ ಯಾತ್ರೆಯು ಸುಗಮವಾಗಿ ನೆರವೇರಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿ ಶುಭ ಹಾರೈಸಲಾಯಿತು.
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಯ್ಯಿದ್ ತ್ವಾಹಾ ಬಾಫಕಿ ತಂಙಳ್ ಅವರ ಘನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಮಾರ್ಗದರ್ಶಕರಾಗಿ, ಅಬ್ದುಲ್ ಅಝೀಝ್ ಮೂಳೂರು (ಉಪಾಧ್ಯಕ್ಷರು, ಸೆಂಟ್ರಲ್ ಕಮಿಟಿ) ಡಿಕೆಯಸ್ಸಿ ಯು.ಎ.ಇ ನೇತಾರರಾದ, ಎಂ.ಇ. ಮೂಳೂರು, ಇಬ್ರಾಹಿಂ ಹಾಜಿ ಕಿನ್ಯ, ಹಾಜಿ ಅಬ್ದುಲ್ಲಾ ಪೆರುವಾಯಿ, ಎಂ.ಇ. ಸುಲೈಮಾನ್ ಮೂಳೂರು, ಅಬ್ದುಲ್ಲತೀಫ್ ತಿಂಗಳಾಡಿ, ರಿಯಾಝ್ ಮೂಡುತೋಟ, ರಿಯಾಝ್ ಕುಳಾಯಿ, ಇಬ್ರಾಹಿಂ ಕಳತ್ತೂರ್, ಹಾಜಿ ನವಾಝ್ ಕೋಟೆಕ್ಕಾರ್, ಸಮದ್ ಬಿರಾಳಿ, ಮುಹಮ್ಮದ್ ಅಯ್ಯೂಬ್ ಸಾಗರ್, ಷರೀಫ್ ಬೊಲ್ಮಾರ್, ಇಸ್ಮಾಯೀಲ್ ಬಾಬಾ ಮೂಳೂರು, ಶಂಸುದ್ದೀನ್ ಪುಲಿಗೋಡ್, ವಹಾಬ್ ಕಂಚಿಲಕುಂಜ, ಹಸನ್ ಹಾಜಿ ಬಾಳೆಹೊನ್ನೂರು, ಅಶ್ರಫ್ ಉಳ್ಳಾಲ, ಇಕ್ರಂ ಮೂಳೂರು, ತೌಫೀಖ್ ಕುಂದಾಪುರ, ಹಸನ್ ಹಳೆಯಂಗಡಿ ಹಾಗೂ ಮುನೀರ್ ಕೋಡಿ ಮುಂತಾದವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ನೀಡಿದರು.
ಸಂಪೂರ್ಣ ಕಾರ್ಯಕ್ರಮವನ್ನು ಯೂಸುಫ್ ಅರ್ಲಪದವು ಅವರು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ
ಸತತ 13ನೇ ವರ್ಷವೂ ದಾರುಲ್ ಇರ್ಶಾದ್ ಬಾಯ್ಸ್ ಹೈಸ್ಕೂಲ್ಗೆ 100% ಫಲಿತಾಂಶ