janadhvani

Kannada Online News Paper

ದುಬೈ: ವಾಸಸ್ಥಳದಲ್ಲಿ ಸ್ನೇಹಿತರ ಮಧ್ಯೆ ವಾಕ್ಸಮರ- ಬಿಡಿಸಲು ಯತ್ನಿಸಿದ ಯುವಕ ಚೂರಿ ಇರಿತದಿಂದ ಮೃತ್ಯು

ದುಬೈ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಸೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಅತಿಯಾದ ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ

ದುಬೈ: ಸ್ನೇಹಿತರ ನಡುವಿನ ಗಲಾಟೆಯನ್ನು ಶಾಂತಗೊಳಿಸಲು ಹೋದ ಮಲಯಾಳಿ ಯುವಕನೋರ್ವ ದುಬೈನಲ್ಲಿ ಚೂರಿ ಇರಿತಕ್ಕೆ ಬಲಿಯಾಗಿರುವ ದಾರುಣ ಘಟನೆ ವರದಿಯಾಗಿದೆ.

ಕೋಝಿಕ್ಕೋಡ್ ಜಿಲ್ಲೆಯ ಚೆರುವಣ್ಣೂರು ಮಧುರ ಬಜಾರ್ ನಿವಾಸಿ, ನಜಾತ್ ಮಂಜಿಲ್‌ನ ಜಸೀಲ್ (32) ಮೃತಪಟ್ಟ ದುರ್ದೈವಿ. ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದ ಇವರು, ತಾವು ವಾಸವಿದ್ದ ರೂಮಿನಲ್ಲಿ ಇಬ್ಬರು ಸ್ನೇಹಿತರ ನಡುವೆ ನಡೆಯುತ್ತಿದ್ದ ತೀವ್ರ ವಾಕ್ಸಮರವನ್ನು ತಡೆಯಲು ಮಧ್ಯಪ್ರವೇಶಿಸಿದ್ದರು. ಈ ಸಂದರ್ಭದಲ್ಲಿ ಸ್ನೇಹಿತನೊಬ್ಬ ಚೂರಿಯಿಂದ ಇರಿದಿದ್ದರಿಂದ ಜಸೀಲ್ ಅವರ ಕುತ್ತಿಗೆಗೆ ಗಂಭೀರ ಗಾಯವಾಗಿತ್ತು.

ವಿಷಯ ತಿಳಿದ ಕೂಡಲೇ ದುಬೈ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಸೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಅತಿಯಾದ ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ದುಬೈನ ಅಲ್ ರಾಶಿದಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿರಿ...