ಮಸ್ಕತ್: ಈ ವರ್ಷದ ಈದ್ ಅಲ್-ಫಿತರ್ ಆಚರಣೆಯ ಸಂಭ್ರಮದಲ್ಲಿ ಒಮಾನ್ ನಿವಾಸಿಗಳು ಹಾಗೂ ವಲಸಿಗರಿಗೆ ಈ ಬಾರಿ ಸತತ ಐದು ದಿನಗಳ ಸುದೀರ್ಘ ರಜೆ ಲಭಿಸುವ ಸಾಧ್ಯತೆಯಿದೆ. ಖಗೋಳ ಶಾಸ್ತ್ರದ ಲೆಕ್ಕಾಚಾರಗಳು ಮತ್ತು ಒಮಾನ್ನ ರಜಾ ನಿಯಮಗಳನ್ನು ವಿಶ್ಲೇಷಿಸಿದರೆ, ಮಾರ್ಚ್ 19ರಿಂದ ಮಾರ್ಚ್ 23ರವರೆಗೆ ರಜೆ ದೊರೆಯುವ ನಿರೀಕ್ಷೆಯಿದೆ.
ಲೆಕ್ಕಾಚಾರ ಹೀಗಿದೆ:
ಒಮಾನ್ನಲ್ಲಿ ಫೆಬ್ರವರಿ 19ರಿಂದ ರಂಜಾನ್ ಆರಂಭವಾಗಿದ್ದು, ಮಾರ್ಚ್ 19 ಗುರುವಾರ (ರಂಜಾನ್ 29) ಚಂದ್ರ ದರ್ಶನ ವೀಕ್ಷಣೆ ನಡೆಯಲಿದೆ. ಒಮಾನ್ ನಿಯಮದಂತೆ ರಂಜಾನ್ 29ರಿಂದ ಶವ್ವಾಲ್ 3ರವರೆಗೆ ಈದ್ ರಜೆ ಇರುತ್ತದೆ. ಖಗೋಳ ಶಾಸ್ತ್ರದ ಪ್ರಕಾರ ಮಾರ್ಚ್ 20 ಶುಕ್ರವಾರ ಈದ್ ಬರುವ ಸಾಧ್ಯತೆಯಿದ್ದು, ಈದ್ನ ಮೊದಲ ದಿನ ಶುಕ್ರವಾರ ಅಥವಾ ಶನಿವಾರ ಬಂದರೆ ಹೆಚ್ಚುವರಿ ಒಂದು ದಿನದ ರಜೆ ನೀಡುವ ನಿಯಮ ಒಮಾನ್ನಲ್ಲಿದೆ. ಇದರನ್ವಯ ಮಾರ್ಚ್ 23 ಸೋಮವಾರದವರೆಗೂ ರಜೆ ವಿಸ್ತರಣೆಯಾಗಲಿದ್ದು, ಒಟ್ಟು 5 ದಿನಗಳ ರಜೆ ಸಿಗಲಿದೆ.
ಆದರೆ, ಔಖಾಫ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಚಂದ್ರ ದರ್ಶನದ ನಂತರವಷ್ಟೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.
ಯುಎಇಯಲ್ಲಿ ನಾಲ್ಕು ದಿನ ರಜೆ:
ಇದೇ ವೇಳೆ, ಯುಎಇ ಸರ್ಕಾರವು ಈಗಾಗಲೇ ತನ್ನ ನೌಕರರಿಗೆ ಮಾರ್ಚ್ 19 ಗುರುವಾರದಿಂದ ಮಾರ್ಚ್ 22 ಭಾನುವಾರದವರೆಗೆ ನಾಲ್ಕು ದಿನಗಳ ರಜೆಯನ್ನು ಘೋಷಿಸಿದೆ. ಖಾಸಗಿ ವಲಯಕ್ಕೆ ಸದ್ಯ ಶನಿವಾರದವರೆಗೆ ರಜೆ ನೀಡಲಾಗಿದ್ದು, ರಂಜಾನ್ 30 ದಿನ ಪೂರ್ಣಗೊಂಡರೆ ಅಲ್ಲಿಯೂ ಭಾನುವಾರದವರೆಗೆ ರಜೆ ಮುಂದುವರಿಯಲಿದೆ.
















ಇನ್ನಷ್ಟು ಸುದ್ದಿಗಳು
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ: ಕ್ಷಿಪಣಿ ದಾಳಿಗಳನ್ನು ತಕ್ಷಣ ನಿಲ್ಲಿಸುವಂತೆ ಒಮಾನ್ ಆಗ್ರಹ
ಚಳಿಯಿಂದ ತಪ್ಪಿಸಲು ಟ್ರಕ್ ಒಳಗೆ ಹೀಟರ್ ಇಟ್ಟು ಮಲಗಿದ್ದ ಭಾರತೀಯ ಯುವಕನಿಗೆ ದಾರುಣ ಅಂತ್ಯ
ಒಮಾನ್ನಲ್ಲಿ ಭಾರೀ ಮಳೆ : ಓರ್ವ ಭಾರತೀಯ ಸೇರಿದಂತೆ 12 ಮಂದಿ ಮೃತ್ಯು
ವಲಸಿಗರಿಗೆ ಶುಭ ಸುದ್ದಿ: ರಾಷ್ಟ್ರೀಯ ದಿನದ ಅಂಗವಾಗಿ ನಾಲ್ಕು ದಿನಗಳ ಸಾರ್ವಜನಿಕ ರಜೆ ಘೋಷಣೆ
ನಾಳೆ KCF ಒಮಾನ್ ವತಿಯಿಂದ ಅಲ್ ಮುಬಾಶಿರ ಗ್ರ್ಯಾಂಡ್ ಫ್ಯಾಮಿಲಿ ಮೀಟ್
KCF ಒಮಾನ್ ಸೊಹಾರ್ ಝೋನ್ ವತಿಯಿಂದ ಮೀಲಾದ್ ಕಾನ್ಫರೆನ್ಸ್ & ಇಹ್ಸಾನ್ ಕನ್ವೆನ್ಶನ್ -2022
ಸೆ.23: ಮಸ್ಕತ್ತಿನಲ್ಲಿ ಮುಈನುಸುನ್ನಾ UPLIFT ವೈಚಾರಿಕ ಸಮಾವೇಶ
ನವೀಕರಿಸಿದ ವೀಸಾವನ್ನು ಪಾಸ್ಪೋರ್ಟ್ನಲ್ಲಿ ಸ್ಟ್ಯಾಂಪ್ ಮಾಡುವುದು ಕಡ್ಡಾಯವಲ್ಲ
ವಲಸಿಗರ ವೀಸಾ ನವೀಕರಣ ಶುಲ್ಕ ಕಡಿತ- ಪರಿಷ್ಕೃತ ದರ ಜಾರಿ